ತಾಳ್ಮೆ
🔊Click here for audio recitation ನಲ್ಮೆಯಾ ಒಲವಿಗೆ ಇರಲಿ ತಾಳ್ಮೆ ಅವಸರದ ಸರಸವದು ಎಂದು ಸಲ್ಲ। ನಲ್ಮೆಯಾ ಒಲವಿಗೆ ಇರಲಿ ತಾಳ್ಮೆ॥ ಮೊಗ್ಗು ಹೂವಾಗುವುದು ಅರಳಿ ಪರಿಮಳ ಬೀರಿ। ದುಂಬಿಯ ಚುಂಬನಕೆ ತಾನು ಇರೆ ಕಾತುರ॥ ನಲ್ಮೆಯಾ ಒಲವಿಗೆ ಇರಲಿ ತಾಳ್ಮೆ ಬಾಯಾರಿ ತಳೆದಿಹಳು ಬಹುದಿ ಕಾತುರದಿಂದ। ಬರಿದ ಬಸುರಾಗಿಸಲು ಆ ಭೂ ದೇವಿಯು॥ ನಲ್ಮೆಯಾ ಒಲವಿಗೆ ಇರಲಿ ತಾಳ್ಮೆ ನಭದಿ ಕಾರ್ಮೋಡಗಳು ತೆಂಕಣದಿ ತೇಲುತಲಿ। ತಾವೆ ಅರಸುತ್ತ ಬರುವಳು ಅವಳೆಡೆಗೆ॥ ನಲ್ಮೆಯಾ ಒಲವಿಗೆ ಇರಲಿ ತಾಳ್ಮೆ ಬೀಜದಿಂ ಹೊರಹೊಮ್ಮೆ ಜೀವ ತಾ ತಳೆಯುವುದು। ಮರವಾಗಿ ಹಣ್ಣಿಟ್ಟು ಮರು ಬೀಜ ಕೊಟ್ಟು॥ ನಲ್ಮೆಯಾ ಒಲವಿಗೆ ಇರಲಿ ತಾಳ್ಮೆ ತಾಳ್ಮೆಯಿರೆ ಜೀವನವು ತಾಳ್ಮೆ ಜೀವದ ಆಳ। ನಲ್ಮೆಯು ಜೀವನವು ತಿಳೆ ಜಾಣನು॥