ನೌಕೆ - ಪಯಣ
ನಮ್ಮ ಬಾಳ ನೌಕೆಯಲ್ಲಿ
ತೇಲಿ ಹೋಗುವ।
ದೂರದೊಂದು ಕಡಲ ಕರೆಗೆ
ಹಾಯ್ದು ಸಾಗುವ॥
ನಮ್ಮ ಪುಟ್ಟ ನೌಕೆಯಲ್ಲಿ
ಹುಟ್ಟು ಹಾಕುವ।
ಬಿರುಗಾಳಿಯು ಬೀಸಿದಾಗ
ಲಂಗರಿಳಿಸುವ॥
ತೇಲುತಲಿರೆ ಸೌಮ್ಯದಿಂದ
ನಮ್ಮ ನೌಕೆಯು।
ನೆಮ್ಮದಿಯಲಿ ಶಾಂತವಾಗಿ
ಸಮಯ ಕಳೆಯುವ॥
ಶಾಂತ ರೌದ್ರ ಸಾಗರವಿದು
ಭಾವ ವಿಧ ವಿಧ ।
ಸಮಚಿತ್ತದಿ ಎದುರಿಸೋಣ
ಎಲ್ಲವೂ ಹದ॥
ಸುತ್ತ ಮುತ್ತ ಕ್ಷಾರವಿದ್ದ
ನೀರು ಬಹುವಿದೆ।
ಬಾಯಾರಿದ ಬಾಯಿಗಿಂದು
ಬೊಗಸೆ ಬೇಕಿದೆ॥
ಬೇರೆಯೊಬ್ಬನಿಹನು ಎಲ್ಲೊ
ನಮ್ಮ ಕಾಯುತ।
ನಮ್ಮ ಹೊಣೆ, ಅವನೇ ಜಾಣ
ಎಂದು ನಮಿಸುವ॥

ಬಹಳ ಅದ್ಭುತವಾಗಿದೆ
ಪ್ರತ್ಯುತ್ತರಅಳಿಸಿಅದ್ಭುತ ಸಾಲುಗಳು
ಪ್ರತ್ಯುತ್ತರಅಳಿಸಿVery nice lines sir. Prasa is very good. Connection to the lord is superb.
ಪ್ರತ್ಯುತ್ತರಅಳಿಸಿ