ಮರ
ಮರವಾಗಿ ಇರಬೇಕು ನಾನು ಈ ಧರೆಯೊಳಗೆ
ಚಂದದ ತರುವಿನಿಂಜೀವನದ ಅರಿವಾಗೆ
ಮರವಾಗಿರ ಬೇಕು ನಾನು ಈ ಧರೆಯೊಳಗೆ॥
ಚಂದದ ತರುವಿನಿಂಜೀವನದ ಅರಿವಾಗೆ
ಮರವಾಗಿರ ಬೇಕು ನಾನು ಈ ಧರೆಯೊಳಗೆ॥
ಆಳ ಆಳಕೆ ಹೊಕ್ಕಿ ಧರಣಿಯೊಳು ಧೃಡವಾಗಿ
ಹರಡಿ ಈ ಭುವಿಯೊಳಗೆ ಭದ್ರ ಬುನಾದಿಯೆನಿಪ।
ಬಲು ಹಳೆಯ ಕಾಣದಾ ಬೇರನು ನಾ ಹೊಂದಿ
ಮರವಾಗಿರಬೇಕು ನಾನು ಈ ಧರೆಯೊಳಗೆ॥
ಮೇಲ್ಮೇಲಕೆ ಏರಿ ಗಗನದಲಿ ವಿಸ್ತರಿಸಿ
ಚಾಮರದಂತೆ ಚಾಚಿ ದಿಕ್ಕುಗಳ ದಿಕ್ಕರಿಪ।
ಹಚ್ಚ ಪಚ್ಚೆಯ ಹುರುಪ ತೋರುವ
ಮರವಾಗಿರಬೇಕು ನಾನು ಈ ಧರೆಯೊಳಗೆ॥
ಥಕ ಥೈಯೆಂದು ತಂಗಾಳಿಯಲಿ ನೃತ್ಯವನಾಡಿ
ಬಿರುಗಾಳಿಯಲಿ ಧೃತಿಗೆಡದೆ ಛಲದಿನಿಂತಿರ್ಪ।
ಸದೃಡ ಸಶಕ್ತ ಕೊಂಬೆ ಖಾಂಡಗಳುಲ್ಲ
ಮರವಾಗಿರಬೇಕು ನಾನು ಈ ಧರೆಯೊಳಗೆ॥
ಚಿಲಿ ಪಿಲಿ ಹಕ್ಕಿಗಳ ಗೂಡಿಗಾಶ್ರಯವಾಗಿ
ಹರಡಿ ಛಾಯೆಯ ಚೆಲ್ಲಿ ಪಯಣಿಗಗೆ ತಣಿಪ।
ದಾರಿಯಲಿ ಗುರುತಾಗಿ ಸುತ್ತ ಕಟ್ಟೆಯನಿಟ್ಟ
ಮರವಾಗಿರ ಬೇಕು ನಾನು ಈ ಧರೆಯೊಳಗೆ॥
ಮುದದಿ ಒಂದು ದಿನ ಮುಂದೊಮ್ಮೆ ಮುದಿಯಾಗಿ
ಹೇಗಾದರೂ ಸರಿಯೆ ಇತರರಿಗೆ ಆಸೆಯ ಮಣಿಪ।
ಒಲೆ ಉರುವಲು ಆಗಿ, ಮನೆಯ ಪೀಠೋಪಕರಣವೆಯಾಗಿ
ಮರವಾಗಿರ ಇದ್ದಿರಬೇಕು ಜಾಣ ಈ ಧರೆಯೊಳಗೆ॥
Sir,
ಪ್ರತ್ಯುತ್ತರಅಳಿಸಿಅದ್ಭುತ ಕವನ ಜೀವಿತವನ್ನು ಮರದಂತೆ ಬದುಕಬೇಕೆಂಬ ನಿಮ್ಮ ಸಂದೇಶ ತುಂಬಾ ಸ್ಪಷ್ಟವಾಗಿದೆ.
ನೀವು ಸುಪ್ರಜಿತ್‌ನ ಒಂದು ಮಹಾ ವೃಕ್ಷ. ಈ ಕವನದ ಪ್ರತಿಯೊಂದು ಪದ್ಯದಲ್ಲಿಯೂ ನಿಮ್ಮ ಜೀವನ ಮಾರ್ಗವನ್ನು ಸುಪ್ರಜಿತ್‌ನಲ್ಲಿ ನಾನು ಕಲ್ಪಿಸಿಕೊಳ್ಳಬಲ್ಲೆ.
ನಿಮ್ಮ ಬರಹವನ್ನು ಓದುವ ಅವಕಾಶ ಸಿಕ್ಕಿರುವುದು ನನಗೆ ಭಾಗ್ಯವೆಂದು ಭಾವಿಸುತ್ತೇನೆ.
ಧನ್ಯವಾದಗಳು. ನಾನು ನಿಮಿತ್ತ ಮಾತ್ರ. ಎಲ್ಲಾ ದೈವಲೀಲೆ
ಅಳಿಸಿ