ಮರ

 

ಮರವಾಗಿ ಇರಬೇಕು ನಾನು ಈ ಧರೆಯೊಳಗೆ
ಚಂದದ ತರುವಿನಿಂ ಜೀವನದ ಅರಿವಾಗೆ
ಮರವಾಗಿರ ಬೇಕು ನಾನು ಈ ಧರೆಯೊಳಗೆ॥


ಆಳ ಆಳಕೆ ಹೊಕ್ಕಿ ಧರಣಿಯೊಳು ಧೃಡವಾಗಿ

ಹರಡಿ ಈ ಭುವಿಯೊಳಗೆ ಭದ್ರ ಬುನಾದಿಯೆನಿಪ।

ಬಲು ಹಳೆಯ ಕಾಣದಾ ಬೇರನು ನಾ ಹೊಂದಿ 

ಮರವಾಗಿರಬೇಕು ನಾನು ಈ  ಧರೆಯೊಳಗೆ॥


ಮೇಲ್ಮೇಲಕೆ ಏರಿ ಗಗನದಲಿ ವಿಸ್ತರಿಸಿ

ಚಾಮರದಂತೆ ಚಾಚಿ ದಿಕ್ಕುಗಳ ದಿಕ್ಕರಿಪ।

ಹಚ್ಚ ಪಚ್ಚೆಯ ಹುರುಪ ತೋರುವ

ಮರವಾಗಿರಬೇಕು ನಾನು ಈ  ಧರೆಯೊಳಗೆ॥


ಥಕ ಥೈಯೆಂದು ತಂಗಾಳಿಯಲಿ ನೃತ್ಯವನಾಡಿ

ಬಿರುಗಾಳಿಯಲಿ ಧೃತಿಗೆಡದೆ ಛಲದಿನಿಂತಿರ್ಪ।

ಸದೃಡ ಸಶಕ್ತ ಕೊಂಬೆ ಕಾಂಡಗಳ ಬಲದಲ್ಲಿ

ಮರವಾಗಿರಬೇಕು ನಾನು ಈ  ಧರೆಯೊಳಗೆ॥


ಚಿಲಿ ಪಿಲಿ ಹಕ್ಕಿಗಳ ಗೂಡಿಗಾಶ್ರಯವಾಗಿ

ಹರಡಿ ಛಾಯೆಯ ಚೆಲ್ಲಿ ಪಯಣಿಗಗೆ ತಣಿಪ।

ದಾರಿಯಲಿ ಗುರುತಾಗಿ ಸುತ್ತ ಕಟ್ಟೆಯನಿಟ್ಟ

ಮರವಾಗಿರ ಬೇಕು ನಾನು ಈ  ಧರೆಯೊಳಗೆ॥


ಮುದದಿ ಒಂದು ದಿನ ಮುಂದೊಮ್ಮೆ ಮುದಿಯಾಗಿ

ಹೇಗಾದರೂ ಸರಿಯೆ ಇತರರಿಗೆ ಆಸೆಯ ಮಣಿಪ।

ಒಲೆ ಉರುವಲು ಆಗಿ, ಮನೆಯ ಪೀಠೋಪಕರಣವೆಯಾಗಿ

ಮರವಾಗಿರಬೇಕಿತ್ತು ಜಾಣ ಈ  ಧರೆಯೊಳಗೆ॥

ಕಾಮೆಂಟ್‌ಗಳು

  1. Sir,
    ಅದ್ಭುತ ಕವನ ಜೀವಿತವನ್ನು ಮರದಂತೆ ಬದುಕಬೇಕೆಂಬ ನಿಮ್ಮ ಸಂದೇಶ ತುಂಬಾ ಸ್ಪಷ್ಟವಾಗಿದೆ.
    ನೀವು ಸುಪ್ರಜಿತ್‌ನ ಒಂದು ಮಹಾ ವೃಕ್ಷ. ಈ ಕವನದ ಪ್ರತಿಯೊಂದು ಪದ್ಯದಲ್ಲಿಯೂ ನಿಮ್ಮ ಜೀವನ ಮಾರ್ಗವನ್ನು ಸುಪ್ರಜಿತ್‌ನಲ್ಲಿ ನಾನು ಕಲ್ಪಿಸಿಕೊಳ್ಳಬಲ್ಲೆ.
    ನಿಮ್ಮ ಬರಹವನ್ನು ಓದುವ ಅವಕಾಶ ಸಿಕ್ಕಿರುವುದು ನನಗೆ ಭಾಗ್ಯವೆಂದು ಭಾವಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  2. Very Nice Mohana. This poem is a gentle meditation on purpose, resilience, and service and symbol of a meaningful life.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಉಗಾದಿ

“ಕಳೆದ” ಸ್ನೇಹ