ಕನಸುಗಳು

🔊 Click here for audio recitation

ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು

ಕನಸುಗಳನರಸುವೆನು ಕಣ್ಣ ಮುಚ್ಚಿ॥


ಬಲು ಭಾರದಾ ಕಂಬಳಿಯ ನಾ ಬಿಚ್ಚಿ

ಈ ಬಿಸಿಯೊಳು ನಾ ಹೊದ್ದುದೇಕೆ?

ಬೆವರುತಿಹೆ ಕನಸಿನೊಳು ಹಿಂದಿನದ ನೆನೆಯುತ್ತ

ನಿನ್ನೆಗಳಿಗಿದು ಎಂಥ ಪರಿತಾಪವು?


ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು

ಕನಸುಗಳನರಸುವೆನು ಕಣ್ಣ ಮುಚ್ಚಿ॥


ಬಯಲಿನ ಚಳಿಗೆ ಇಂದು ಕಂಬಳಿಯ ಬಯಸಿದೆನು

ಮೈಗೆಲ್ಲ ಮುದಕೊಟ್ಟು ಶಾಖವಿತ್ತು।

ಹಿಂದೆಗೈದಾ ಸುಕೃತ ಮರಳಿ ನನ್ನನು ಸುತ್ತಿ

ಕಾಪಾಡುತಿಹುದೇನು ರಕ್ಷೆಯಿಟ್ಟು?


ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು

ಕನಸುಗಳನರಸುವೆನು ಕಣ್ಣ ಮುಚ್ಚಿ॥


ಒಮ್ಮೊಮ್ಮೆ ಬೇಸರವು ಬೇಡೆನಗೆ ಕಂಬಳಿಯು

ತಳ್ಳಿದೆನು ಕಂಬಳಿಯನಾಚೆ ನಾನು 

ಅದರ ಆಸರೆಯು ಬೇಕೇನು ಇಂದೆನಗೆ

ನೋಡುವೆನು ಹೊಸ ಕನಸ ನಾಳೆಗೆಂದು॥


ನಿನ್ನೆಗಳ ಕಂಬಳಿಯು ಬೇಡವಿನ್ನೋ  ಜಾಣ

ಹೊಸ ಕನಸುಗಳನರಸುವೆನು ಕಣ್ಣ ಮುಚ್ಚಿ॥


ಕಾಮೆಂಟ್‌ಗಳು

  1. ನಿಮ್ಮ photo ಬಹಳ ಚೆನ್ನಾಗಿ ಇದೆ.first class. positive mind searches for hosa kanasu. very nice sie

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆನ್ನಾಗಿದೆ ನಿನ್ನ ನುಡಿ ಹಾಗು ನಿನ್ನ ಫೋಟೋ ಮೋಹನ

    ಪ್ರತ್ಯುತ್ತರಅಳಿಸಿ
  3. ತುಂಬಾ ಚೆನ್ನಾಗಿದೆ..ನೆನ್ನೆ ನೆನಪಿನ ಕಂಬಳಿ ಹಾಗೂ ನಾಳೆ ಕನಸು ಎಂಬ ಪರಿಕಲ್ಪನೆ ಅಧ್ಬುತ..ನಿಮ್ಮ ಭಾವಚಿತ್ರ ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ

    ಪ್ರತ್ಯುತ್ತರಅಳಿಸಿ
  4. wonderful thoughts and rendition Mohana. Keep writing.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಉಗಾದಿ

ಮರ

“ಕಳೆದ” ಸ್ನೇಹ