ಕನಸುಗಳು
🔊 Click here for audio recitation
ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು
ಕನಸುಗಳನರಸುವೆನು ಕಣ್ಣ ಮುಚ್ಚಿ॥
ಬಲು ಭಾರದಾ ಕಂಬಳಿಯ ನಾ ಬಿಚ್ಚಿ
ಈ ಬಿಸಿಯೊಳು ನಾ ಹೊದ್ದುದೇಕೆ?
ಬೆವರುತಿಹೆ ಕನಸಿನೊಳು ಹಿಂದಿನದ ನೆನೆಯುತ್ತ
ನಿನ್ನೆಗಳಿಗಿದು ಎಂಥ ಪರಿತಾಪವು?
ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು
ಕನಸುಗಳನರಸುವೆನು ಕಣ್ಣ ಮುಚ್ಚಿ॥
ಬಯಲಿನ ಚಳಿಗೆ ಇಂದು ಕಂಬಳಿಯ ಬಯಸಿದೆನು
ಮೈಗೆಲ್ಲ ಮುದಕೊಟ್ಟು ಶಾಖವಿತ್ತು।
ಹಿಂದೆಗೈದಾ ಸುಕೃತ ಮರಳಿ ನನ್ನನು ಸುತ್ತಿ
ಕಾಪಾಡುತಿಹುದೇನು ರಕ್ಷೆಯಿಟ್ಟು?
ಬೆಚ್ಚನೆಯ ನಿನ್ನೆಗಳ ಕಂಬಳಿಯ ನಾ ಹೊದ್ದು
ಕನಸುಗಳನರಸುವೆನು ಕಣ್ಣ ಮುಚ್ಚಿ॥
ಒಮ್ಮೊಮ್ಮೆ ಬೇಸರವು ಬೇಡೆನಗೆ ಕಂಬಳಿಯು
ತಳ್ಳಿದೆನು ಕಂಬಳಿಯನಾಚೆ ನಾನು
ಅದರ ಆಸರೆಯು ಬೇಕೇನು ಇಂದೆನಗೆ
ನೋಡುವೆನು ಹೊಸ ಕನಸ ನಾಳೆಗೆಂದು॥
ನಿನ್ನೆಗಳ ಕಂಬಳಿಯು ಬೇಡವಿನ್ನೋ ಜಾಣ
ಹೊಸ ಕನಸುಗಳನರಸುವೆನು ಕಣ್ಣ ಮುಚ್ಚಿ॥

ನಿಮ್ಮ photo ಬಹಳ ಚೆನ್ನಾಗಿ ಇದೆ.first class. positive mind searches for hosa kanasu. very nice sie
ಪ್ರತ್ಯುತ್ತರಅಳಿಸಿ🙏🏽
ಅಳಿಸಿSooper.. 👍 nice presentation
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿತುಂಬಾ ಚೆನ್ನಾಗಿದೆ ನಿನ್ನ ನುಡಿ ಹಾಗು ನಿನ್ನ ಫೋಟೋ ಮೋಹನ
ಪ್ರತ್ಯುತ್ತರಅಳಿಸಿಧನ್ಯವಾದಗಳು ಸುಧೀಂದ್ರ
ಅಳಿಸಿತುಂಬಾ ಚೆನ್ನಾಗಿದೆ..ನೆನ್ನೆ ನೆನಪಿನ ಕಂಬಳಿ ಹಾಗೂ ನಾಳೆ ಕನಸು ಎಂಬ ಪರಿಕಲ್ಪನೆ ಅಧ್ಬುತ..ನಿಮ್ಮ ಭಾವಚಿತ್ರ ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ
ಪ್ರತ್ಯುತ್ತರಅಳಿಸಿಧನ್ಯವಾದಗಳು ರಘವೇಂದ್ರ
ಅಳಿಸಿwonderful thoughts and rendition Mohana. Keep writing.
ಪ್ರತ್ಯುತ್ತರಅಳಿಸಿThanks
ಅಳಿಸಿFantastic....
ಪ್ರತ್ಯುತ್ತರಅಳಿಸಿThanks
ಅಳಿಸಿ