ಕಾಲ


 ಕಾಲಾನಂತ ಎಂದು ಅದಕೆ 
ಇಲ್ಲ ಆದಿ ಅಂತ್ಯವು|
ಆದಿ ಅಂತ್ಯವಿಲ್ಲದಾ
ಕಾಲ ಎಂದು ಸತ್ಯವು|
ಕಾಲ ಸತ್ಯ ಇಂದಿಗಿಂದು 
ಕಾಲ ಬಹಳ ಕ್ಷಣಿಕವು|
ಕ್ಷಣದ ಕಾಲ ಕಳೆದು ಹೋಗೆ 
ಬೊಗಸೆ ನೀರಿನಂದದಿ|
ಹಿಡಿಯ ಹೋದೆ ಜಾರಿ ಹೋಯ್ತು 
ನನ್ನ ಬೆರಳ ಸಂದಲಿ॥

ಮರಳಿ ಕೈಯನದ್ದಿ ಹಿಡಿದೆ
ಮತ್ತೆ ಬೊಗಸೆ ನೀರನು|
ತಿಳಿತಿಳಿದೂ ನೀರು ನುಸುಳಿ
ಹೋಗುವುದದು ಕ್ಷಣದಲಿ|
ಕ್ಷಣಿಕ ನೀರ ಹಿಡಿಯುವಾಸೆ,
ಹಿಡಿದ ನೀರ ಕುಡಿಯುವಾಸೆ|
ತಣಿಸುವುದು ಒಣ ಕಂಠವ
ತೃಪ್ತನಾದೆ, ನಿರ್ಲಿಪ್ತನಾದೆ
ಮಾಯವಾದ ನೀರ ನೋಡೆ
ತಿಳಿದೆ ಜಾಣ ಸತ್ಯವ॥
- ನಾ ಶ್ರೀ ಮೋ

ಕಾಮೆಂಟ್‌ಗಳು

  1. ಅಂತ್ಯ ವಿಲ್ಲದ ಕಾಲದ ಹಾಗೆ ನಿರಂತರ ಹರಿಯುತ್ತಿರಲಿ ನಿಮ್ಮ ಕಾವ್ಯ ಕಾಲುಗೆ.

    ಪ್ರತ್ಯುತ್ತರಅಳಿಸಿ
  2. ಅಕ್ಷರಸಹ ಸತ್ಯವಾದ ಸಂಗತಿ. ನಾವೆಲ್ಲರೂ ಕಾಲ ಚಕ್ರದಲ್ಲಿರುವ ಜೀವ ಕಣಗಳು. ಕಾಲಾಯ ತಸ್ಮ್ಯಯ್ ನಮ: ಬಹಳ ಸೊಗಸಾಗಿ ಮೂಡಿ ಬಂದಿದೆ ಸರ್.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ