ಮರೆಯಲಾರದ ಹಾಡು
Click here for audio recitation
ಅದೇಕೋ ಈ ಮುಂಜಾನೆ
ನನಗೇ ಅರಿವಿಲ್ಲದೆಯೆ
ಮನಹೊಕ್ಕು ಸುಳಿದಾಡಿತು
ಮರೆಯಲಾರದ ಹಾಡು||
ಹಾಡಿನ ಭಾವವೋ
ಅದರ ಒಳಾರ್ಥವೋ
ಹಾಡಿದಾ ಮೋಹಕ ದನಿಯೋ
ಹೇಗೆ ನುಸಿಳಿತೋ ಏನಗೆ ತಿಳಿಯದೆಯೆ||
ಹೊರದೂಡಲಿಚ್ಚಸದೆಯೆ
ಮೆಲಕು ಹಾಕುತ್ತಿದ್ದೆ ಮನದೊಳು
ಕೇಳಲಸ್ಪಶ್ಠ ಮೆಲುದನಿಯೊಳು
ಕೇಳುತ್ತಿದ್ದವು ಕಿವಿ, ಕಿವಿಗೊಡದೆಯೆ||
ಸಾಗರದಾಲೆಗಳಂತೆ ಮರುಕಳಿ ಬರುತಿಹವು
ತನ್ನ ಛಂದಿಸ್ಸಿನ ಛಾಪವನು ಮೂಡುತ್ತ
ಋುತುಗಳಾ ಸಮಯ ನಿಖರತೆಯಲಿ
ಮತ್ತೊಮ್ಮೆ ಮಗದೊಮ್ಮೆ ಹೊರಹೊರಳಿಸಿ||
ಕಾಡುತಿಹುದೇಕೊ ಸುಮ್ಮನಿರಗೊಡದೆ
ಶಾಂತತೆಯ ತೋರಿ ಚಲನಕ್ರಿಯೆಯೂ ಆಗಿ
ನೆಮ್ಮದಿಯ ನೀಡುತ್ತ ನಿಶ್ಕ್ರಿಯೆಯು ಆಗಿಸದೆ
ತಂಗಾಳಿಯಂತಾಗಿ ಬಿರುಗಾಳಿಬೀಸುತಿದೆ||
ಅದೇಕೋ ಈ ಮುಂಜಾನೆ
ನನಗೇ ಅರಿವಿಲ್ಲದೆಯೆ
ಮನಹೊಕ್ಕು ಸುಳಿದಾಡಿತು
ಮರೆಯಲಾರದ ಹಾಡು||
- ನಾ ಶ್ರೀ ಮೋಹನ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ