ಸಮಯದ ಯಂತ್ರ
Click here for audio recitation 🔊
ಕಾಲದೊಳು ಮುನ್ನುಗ್ಗಿ ಹಿಗ್ಗಿ
ಮುಂದೇನಾಗುವುದದನಾನರಿಯೆ|
ಅದಾವ ಯಂತ್ರ, ತಂತ್ರಕೆ ಮಣಿದು
ಅದಾವ ಯಂತ್ರ, ತಂತ್ರಕೆ ಮಣಿದು
ಏನ ತಿಳಿಸುವುದೊ ನಾ ತಿಳಿಯೆ|
ಕಾಲದ ಬಿಲದಲಿ ನುಗ್ಗಿ ಹಿಂತಿರುಗಿ
ನಡೆದ ಕೆಲ ಘಟನಾವಳಿಯ ನಾನರಸಿ|
ನೋಡಿದೆ ಹಲ ಉಲ್ಲಾಸ ಫಟನೆಗಳ
ನೋಡಿದೆ ಹಲ ಉಲ್ಲಾಸ ಫಟನೆಗಳ
ಕೆಲ ಮರೆತ ಕಹಿ ಸತ್ಯಗಳ॥
ಪಶ್ಚಾತ್ತಾಪ, ಧನ್ಯತೆ, ಉದ್ವೇಗ,
ನಗೆ, ಜಿಗುಪ್ಸೆ, ಕೋಪಗಳ|
ಹೀಗೆ ಹತ್ತಾರು ಮಾನಸಿಕ
ಹೀಗೆ ಹತ್ತಾರು ಮಾನಸಿಕ
ಅಂತರಾತ್ಮ ಅನುಭವವು|
ಗತಿಸಿದಕೇನು ಚಿಂತೆ
ಗತಿಸಿದಕೇನು ಚಿಂತೆ
ಚಿತೆಯೇರಿತಲ್ಲ ಕಾಲಾಗ್ನಿಯಲಿ|
ಮತ್ತೇಕೆ ಆ ಭೂತಗಳು
ಮತ್ತೇಕೆ ಆ ಭೂತಗಳು
ಕಾಡುತಿವೆ ನನ್ನನ್ನಿಂದು?
ಹಿಂದಿನದಿಂ ಪಾಠ ಕಲಿಯುವಾಸೆ,
ತಪ್ಪ ಸರಿಪಡಿಸುವಾಸೆ।
ಚಿಕ್ಕವನಾಗುವಾಸೆ, ಅಮ್ಮನ
ಚಿಕ್ಕವನಾಗುವಾಸೆ, ಅಮ್ಮನ
ತೊಡೆಯಮೇಲ್ಮಲಗುವಾಸೆ॥
ಗಳೆಯನೊಂದಿಗೆ ಓಡುವಾಸೆ,
ಗಳೆಯನೊಂದಿಗೆ ಓಡುವಾಸೆ,
ಶಾಲೆಗಗೆ ಹೋಗುವಾಸೆ
ಕೈಗೂಡದಾಸೆಗಳ ನೆನಪಿನಂಗಳದಿ
ಕೈಗೂಡದಾಸೆಗಳ ನೆನಪಿನಂಗಳದಿ
ನಾನಿಂದು ಹೊರ ಓಡಿ ಬಂದೆ॥
ಕಂಡೆ ನನ್ನ ಕಾಲ ಯಂತ್ರವ
ಬಲು ಹಳೆಯ ಗೆಳೆಯನಲಿ।
ಕೊಂಡೊಯ್ದ ಯೋವನದ
ಕೊಂಡೊಯ್ದ ಯೋವನದ
ನಮ್ಮಾ ಹಿಂದಿನ ಕಾಲದಲಿ।
ವಿಹರಿಸಿ ಬಂದೆವು ಇಂದಿಗೆ
ವಿಹರಿಸಿ ಬಂದೆವು ಇಂದಿಗೆ
ಮರುಕಳಿಸಿ ಜೊತೆಯಲ್ಲಿ
ಮುಂದೊಂದು ದಿನ ಇಂದಿನ
ಮುಂದೊಂದು ದಿನ ಇಂದಿನ
ದಿನವ ಮೆಲಕುವವ ಜಾಣ॥
- ನಾ ಶ್ರೀ ಮೋ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ