ಕಮಲ
ತಾವರೆಯು ತಾನಾಗಿಯೇ
ಸಂತಸವ ಸೂಸುತ।
ಕೆಸರಲಿದ್ದರೇನು ಕೇಡು?
ನೋಡು ಬಾನಿನತ್ತ॥
ಮೊಗ್ಗು ನೀನು ಅರಳಬಹುದು
ರವಿಯ ನೋಡಿ ಅರಳು।
ನೋಡಿದವರಿಗೆಲ್ಲ ನೀನು
ಆಹ್ಲಾದವ ತರಲು॥
ಕರಿಯ, ಬರಿಯ ಕೊಳಕು ಕೆಸರು
ಬಹಳ ಕೊಳದ ಆಳ।
ಹೀರಿ ನೀನು ಅದರ ರಸವ
ನಡೆಸು ಚೆಂದ ಬಾಳ॥
ತೇಲಲಿಂದು ನೀರ ಮೇಲೆ
ತೋಯದಂತೆ ಎಲೆಯು।
ಬಿದ್ದರೇನು ಹನಿಯ ನೀರು
ಮುತ್ತಾಗಿಪ ಜಾಣ ಕಲೆಯು॥

ಈ ಕವನ ನನ್ನ ಗುರುಗಳಾದ ಶ್ರೀ ಶಂಕರ ಶಾನುಭೋಗ್ ಅವರಿಗೆ ಸಮರ್ಪಿತ.
ಪ್ರತ್ಯುತ್ತರಅಳಿಸಿಅಧ್ಬುತ ಸಾಲುಗಳು
ಪ್ರತ್ಯುತ್ತರಅಳಿಸಿThanks Pradeep
ಅಳಿಸಿAwesome words
ಪ್ರತ್ಯುತ್ತರಅಳಿಸಿThanks.
ಅಳಿಸಿDear sir , very nice and well presented. This relates to humanity very much. Meaning, forget the past, (roots, circumstances etc)
ಪ್ರತ್ಯುತ್ತರಅಳಿಸಿShow best and beautiful results now. Every one will see the present and appreciate you
Thanks Shankaranna
ಅಳಿಸಿಮತ್ತೆ ಮತ್ತೆ ಓದುವಂತೆ ಮಾಡುತ್ತದೆ. ಬಹಳ ಹಳೆಯ ವಿಷಯದಲ್ಲಿ ವಿಭಿನ್ನ ಮತ್ತು ಹೊಸದು! ತುಂಬಾ ಒಳ್ಳೆಯ ಪ್ರಯತ್ನ.
ಪ್ರತ್ಯುತ್ತರಅಳಿಸಿ