ಕಮಲ


ತಾವರೆಯು ತಾನಾಗಿಯೇ

ಸಂತಸವ ಸೂಸುತ।

ಕೆಸರಲಿದ್ದರೇನು ಕೇಡು?

ನೋಡು ಬಾನಿನತ್ತ॥


ಮೊಗ್ಗು ನೀನು ಅರಳಬಹುದು

ರವಿಯ ನೋಡಿ ಅರಳು।

ನೋಡಿದವರಿಗೆಲ್ಲ ನೀನು

ಆಹ್ಲಾದವ ತರಲು॥


ಕರಿಯ, ಬರಿಯ ಕೊಳಕು ಕೆಸರು

ಬಹಳ ಕೊಳದ ಆಳ।

ಹೀರಿ ನೀನು ಅದರ ರಸವ

ನಡೆಸು ಚೆಂದ ಬಾಳ॥


ತೇಲಲಿಂದು ನೀರ ಮೇಲೆ

ತೋಯದಂತೆ ಎಲೆಯು।

ಬಿದ್ದರೇನು ಹನಿಯ ನೀರು

ಮುತ್ತಾಗಿಪ ಜಾಣ ಕಲೆಯು॥



ಕಾಮೆಂಟ್‌ಗಳು

  1. ಈ ಕವನ ನನ್ನ ಗುರುಗಳಾದ ಶ್ರೀ ಶಂಕರ ಶಾನುಭೋಗ್‌ ಅವರಿಗೆ ಸಮರ್ಪಿತ.

    ಪ್ರತ್ಯುತ್ತರಅಳಿಸಿ
  2. Dear sir , very nice and well presented. This relates to humanity very much. Meaning, forget the past, (roots, circumstances etc)
    Show best and beautiful results now. Every one will see the present and appreciate you

    ಪ್ರತ್ಯುತ್ತರಅಳಿಸಿ
  3. ಮತ್ತೆ ಮತ್ತೆ ಓದುವಂತೆ ಮಾಡುತ್ತದೆ. ಬಹಳ ಹಳೆಯ ವಿಷಯದಲ್ಲಿ ವಿಭಿನ್ನ ಮತ್ತು ಹೊಸದು! ತುಂಬಾ ಒಳ್ಳೆಯ ಪ್ರಯತ್ನ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನಸುಗಳು

ಉಗಾದಿ

“ಕಳೆದ” ಸ್ನೇಹ