ಉಗಾದಿ
ಚಂದ್ರನಡಿಗೆ ನಮ್ಮ ನಡಿಗೆ
ಇದು ಶುಕ್ಲ ಕೃಷ್ಣ ತಾಳಕೆ।
ಋುತುಚಕ್ರವು ಉರಳಿತು
ತಂದಿತು ಉಗಾದಿಯು॥
ಮಾಗಿ ಮಾಗಿ, ಗ್ರೀಶ್ಮ ಬಂದು
ತರುಲತೆಗೆ ಶೋಭೆ ತಂದು।
ಮಾವು, ಬೇವು ಬೇರೆನ್ನದೆಯೆ
ಎಲ್ಲದಕ್ಕು ಹಸಿರನುಡಿಸಿ,
ಋುತುಚಕ್ರವು ಉರಳಿತು
ತಂದಿತು ಉಗಾದಿಯು॥
ಎಳೆಯ ಹಸಿರು ಹೊಸೆದುಸಿರು
ಕೋಗಿಲೆಗೂ ಗಾನ ಹುರುಪು।
ಮಾವಿನಡಿಯ ನೆರಳಿನಲ್ಲಿ
ಪಂಚಮದಲಿ ಹಾಡಿದೆ,
ಋುತುಚಕ್ರವು ಉರಳಿತು
ತಂದಿತು ಉಗಾದಿಯು॥
ಸಿಹಿ ಕಹಿಯು ಜಿಹ್ವ ಸತ್ಯ
ಕಷ್ಟ ಸುಖವು ಅನುಭವದ ಸತ್ಯ।
ಮರಮರಳಿ ಸುತ್ತ ಸುತ್ತಿ
ಮಾಯೆ, ಸತ್ಯಗಳನು ಕದಡಿ
ಜಾಣ ಮತ್ತೆ ಪೇಳಿದ
ಋುತುಚಕ್ರವು ಉರಳಲಿ
ಬರಲಿ ಮತ್ತೆ ಉಗಾದಿಯು॥
- ನಾ ಶ್ರೀ ಮೋ

Sooper
ಪ್ರತ್ಯುತ್ತರಅಳಿಸಿAs always
ಪ್ರತ್ಯುತ್ತರಅಳಿಸಿ🙏🏽
ಅಳಿಸಿNamaste. Happy ugadhi to you and your family sir. Welcome to the new year by you is very nice
ಪ್ರತ್ಯುತ್ತರಅಳಿಸಿಧನ್ಯವಾದಗಳು ಶಂಕರಣ್ಣ
ಅಳಿಸಿSuper Mohan.
ಪ್ರತ್ಯುತ್ತರಅಳಿಸಿUgadi habbada haardika shubhashayagalu 🎁🎉
ಧನ್ಯವಾದಗಳು ಶ್ರೀಧರ
ಅಳಿಸಿ