ಮರೆವು

 

🔊 Click here for Audio recitation of the Poem 

ಅದೆನಿತು ದಿನಗಳಾಯಿತು ಮನೆಯ ತೊರೆದು?

ಮನದಳಿಸಿಹೋಯಿತೆ ಹಿಂದಿರುಗುವ ಹಾದಿ ಮರೆತು॥


ಇದ್ದ ಊರು ಹಳೆತಾಗಿ ಹೊಸದೆನಿಸದೆ।

ಬಿದ್ದಿರುವ ಜಾಗದಲಿ ಜಢವಾಗಿ ಮೈಯೊರಗಿ।

ಮುಂದಿನದಕೆ ಚಿಂತಿಸದೆ ಇಂದಿನದ ಮೆಲಕುತ್ತ।

ಮನೆಯ ಮರೆತು ಇಲ್ಲೇ ನಾ ತೂಕಡಿಸುತ।

ಅದೆನಿತು ದಿನಗಳಾಯಿತು ಮನೆಯ ತೊರೆದು?

ಮನದಳಿಸಿಹೋಯಿತೆ ಹಿಂದಿರುಗುವ ಹಾದಿ ಮರೆತು॥


ಅಲ್ಲಿರುವ ಭಂದು ಅಲ್ಲಿದ್ದ ಮಿತ್ರನ ಮರೆತು।

ಇಲ್ಲಿಯ ಕ್ಷಣಕೆ ಭಾಂದವ್ಯ ಮೈತ್ರಿಯನು ಬೆಳಸಿ।

ಇದೆೇ ಶಾಶ್ವತವೆಂದು ಆನಂದದಿ ಭ್ರಮಿಸಿ।

ಕೆಲ ಕಾಲ ತಂಗುದಾಣವ ನಿಜ ವಿಳಾಸವೆಂದೆನಿಸಿ।

ಅದೆನಿತು ದಿನಗಳಾಯಿತು ಮನೆಯ ತೊರೆದು?

ಮನದಳಿಸಿಹೋಯಿತೆ ಹಿಂದಿರುಗುವ ಹಾದಿ ಮರೆತು॥


ಭ್ರಮರ ಹೂವೆಲ್ಲವನು ಮನೆಯೆಂಬುವುದೆ?

ಗೂಡೆಲ್ಲಿಹುದೆಂದು ತಿಳಿಯದೇನದಕೆ?

ಅಲೆಮಾರಿ ಅರಸುತ್ತ ಸಾಂತ್ವವನು ಹುಡುಕುತ್ತ।

ಮನೆಯದಾರಿಯ ಜಾಣ ನಾ ಹುಡುಕುತಿಹೆ।

ಅದೆನಿತು ದಿನಗಳಾಯಿತು ಮನೆಯ ತೊರೆದು?

ಮನದಳಿಸಿಹೋಯಿತೆ ಹಿಂದಿರುಗುವ ಹಾದಿ ಮರೆತು॥

ನಾ ಶ್ರೀ ಮೋ

೨೯/೦೯/೨೦೨೩

ಬುಡಾಪೆಸ್ಟ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ