ಮಿಣುಕು ಹುಳ

 

Image result for insect that glows and blinks

ಮಿಣುಕು ಹುಳ

ಇಲ್ಲೊಮ್ಮೆ ಮತ್ತಲ್ಲೊಮ್ಮೆ
ಮಿನುಗಿಸಿ ಮುದವಿಟ್ಟ
ಮಿಣುಕು ಹುಳ ನಾನು

ಕ್ಷಣ ಕ್ಷಣಕೆ ಮಿಂಚಿಸಿ
ನೋಟಕ್ಕೆ ರೋಮಾಂಚನವಿತ್ತ
ಮಿಣುಕು ಹುಳ ನಾನು

ನಾನೆಲ್ಲೆಂದು? ನಾನಿಲ್ಲೆಂದು!
ಹೀಗೊಮ್ಮೆ ಹಾಗೊಮ್ಮೆ ತೋರಿದ
ಮಿಣುಕು ಹುಳ ನಾನು

ಬೆಳಕಿತ್ತರೂ ಬೆಳಕಿಗೆ ಬಾರದ
ಕುತೂಹಲಕಾರಿ ಜಂತು
ಆ ಮಿಣುಕು ಹುಳ ನಾನು

ಪ್ರಕಾಶಿಸಿದರೂ ಪ್ರಕಾಶಿಸದ
ನಿರುಪಯುಕ್ತ ಬೆಳಕನೀವ
ಮಿಣುಕು ಹುಳ ನಾನು

ಮುಟ್ಟರೆ ಸುಡದ, ಬಚ್ಚಿಟ್ಟರೂ ಮೆಚ್ಚಿಸುವ
ಇದ್ದರೂ ಇರದ, ಇರದಿದ್ದರೂ ಇರುವ
ಮಿಣುಕು ಹುಳ ನಾನು

ನನ್ನಸ್ತಿತ್ವ ನನಗೆ ಎನ್ನಬೆಳಕೆನಗೆಂದು
ನನ್ನತನಕೆ ಸೀಮಿತ ಜೀವಿಯಾದೆ
ಆ ಮಿಣುಕು ಹುಳ ನಾನು
ನಾ ಶ್ರೀ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ