👴ಬೊಕ್ಕ ತಲೆ 👴

 

👴ಬೊಕ್ಕ ತಲೆ 👴


ವಯಸ್ಸಾಯಿತು ಎಂದರು ಎಲ್ಲರೂ,
ಯಾರಿಗೆ ಎಂದೆ ನಾನು ಹುಬ್ಬೇರಿಸಿ!😏
ನೋಡುತ್ತಿದ್ದರು ಜನ ನನ್ನ "ಮಧ್ಯಪ್ರದೇಶ"ದ ಹೊಟ್ಟೆ
ಹಾಗು ದಿವಾಕರನಂತೆ ಹೊಳೆಯುತ್ತಿದ್ದ ನನ್ನ ತಲೆ ಮೊಟ್ಟೆ

ಇವೆರಡಕ್ಕೆ ಆಗಿರ ಬೇಕು ವಯಸ್ಸೆಂದು
ನಕ್ಕು ಸುಮ್ಮನಾಗಿಬಿಟ್ಟೆ. 😀

ಬಿಡಲಿಲ್ಲ ಜನ, ಕರೆದರೂ "ಅಂಕಲ್, ಮಾಮ, ತಾತಾ"ಎಂದೆಲ್ಲಾ ಸಿಕ್ಕಾಪಟ್ಟೆ
ಮತ್ತೆ ಸುಮ್ಮನಾದೆ ಇರಲಿ ಅವರಿಗೆ ಕಿಚ್ಚಿನ ಹೊಟ್ಟೆ

ವಯಸ್ಸಾಯಿತೆಂದವರಿಗೆ  ಈ ವಾದ ಮುಂದಿಟ್ಟೆ
ಮೊಟ್ಟೆಗಿಂತ  ಮೇಲಿರುವುದೆಲ್ಲ ವಯಸ್ಸೆ !
ಸಾಧನೆಯು ಮುಖ್ಯ ನೋಡಿ...
ಗಳಿಸಿದ್ದೇನೆ  ಶ್ರಮವಹಿಸಿ - ಹೊಟ್ಟೆ
ಕೇಶ ತ್ಯಜಿಸಿ ಈ  ಮೊಟ್ಟೆ

ಆದರೂ ಆಳದಲ್ಲೆಲ್ಲೋ ಕೂಗು ಕೇಳಿತು "ದಪ್ಪನೆಯ ಕೋಳಿಮೊಟ್ಟೆ"
ಮಾಡೆಲೇನು ತಿಳಿಯದೆ ಸುಮ್ಮನೆ ಹಾಗೆ ಇದ್ದುಬಿಟ್ಟೆ😒

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ