ಹೆಜ್ಜೆಗಳು

 

🔊 Click here for a video link to the recitation 

https://youtu.be/j9feX27UyF8?si=oq_2xy214lRjRfkf

ಇಟ್ಟ ಹೆಜ್ಜೆಗಳೆಷ್ಟೋ  ನಡೆದ ಪಥಗಳೆನಿತೋ  

ಇಟ್ಟ ಹೆಜ್ಜೆೆಯ ಮೇಲೆ ಮತ್ತಿಟ್ಟ ಹೆಜ್ಜೆಗಳೆಷ್ಟೋ 

ಸವೆದ ಪಾದಳು ಗುರಿಯಿರದ ದಾರಿಗಳು

ನಡೆನಡೆದು ಧಣಿದ ಪಾದಚಾರಿಗಳೆಷ್ಟೊ


ಮರಳ ಮೇಲ್ಗುರುತುಗಳು ದಿಕ್ಸೂಚಿ ಕುರುಹುಗಳು

ಕೈ ಬೀಸಿ ಕರೆಯುತಿಹ ಹೆಜ್ಜೆ ಬಗೆಯು

ನಡೆಯಬೇಕೇನು ಇದನು ಅನುಸರಿಸಿ ನಾವುಗಳು

ಹೋಗಿಸೇರುವುದಿದೆಲ್ಲಿ ಅಜ್ಞಾತವು


ಕಾಯುತಿಹೆ ಅಲೆಅಲೆಯು ಮರಮರಳಿ ಮರುಕಳಿಸಿ

ಅಳಿಸಿಹಾಕಲು ಗುರುತು ಕುರುಹಿಲ್ಲದೆ

ಮಾಯವಾದವೊ ಹೆಜ್ಜೆ ಅದಾವುದನು ನಾ ಹಿಡಿದೆ

ಏನನು ಅನುಸರಿಸಿ ಇಡಲಿ ನನ್ನ ಹೆಜ್ಜೆ


ದೃಡದಿ ಮುಂದಿಡಬೇಕು ಛಲದಿ ನಾ ದೃತಿಗೆಡೆದೆ

ನನ್ನ ಹೆಜ್ಜೆಯ ಗುರುತು ಇನ್ನಿತರಗೆ

ತಿಳಿಯದಾ ಪಥ ತೋಚದಾ ದಿಕ್ಕ ಧಿಕ್ಕರಿಸಿ

ಹೆಜ್ಜೆಯಿಡ ಬೇಕೇನು ಅದರಳಿವಿಗೆ?


ಹಿಂದೆ ನೋಡಿದರೊಮ್ಮೆ ಜೊತೆ ಜೊತೆಯ ಹೆಜ್ಜೆಗಳು

ನಡೆದು ಬಂದದ್ದಕೆ ಇದು ಸಾಕ್ಷಿಯು

ಇರಲಿ ಇಂದಿಗಾದರೂ ಮುಂದೊಮ್ಮೆ ಯಾರಿಗೋ

ಇರಲಿ ಪಥದಾ ಕಥೆಯು ಜಾಣನಳೆಸುವರೆಗೂ

- ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ