ಬಾಲ್ಯ

 





ಎಲ್ಲಿ ಕಳೆದು ಹೋದವೋ 

ಆ ಕಳೆದ ದಿನಗಳು

ಮರುಕಳಿಸಿ ಬಾರದೇಕೊ

ಆ ಸಿಹಿಯ ಕ್ಷಣಗಳು


ಬಣ್ಣ ಹಚ್ಚಿ, ಹೋಲಿ ಎರೆಚಿ

ಸೌದೆ ಕದ್ದು, ಕಾಮನುರಿಸಿ

ಬುಗುರಿ, ಗಿಲ್ಲಿದಾಂಡಲಾಡಿ

ಗಾಳಿ ಪಟವ ಹಾರಿಬಿಟ್ಟ


ಎಲ್ಲಿ ಕಳೆದು ಹೋದವೋ 

ಆ ಕಳೆದ ದಿನಗಳು

ಮರುಕಳಿಸಿ ಬಾರದೇಕೊ

ಆ ಸಿಹಿಯ ಕ್ಷಣಗಳು


ಬೀದಿ ಸುತ್ತಿ, ಕ್ರಿಕೆಟ್ಟಾಡಿ

ಬಣ್ಣದ ಐಸ್ಕ್ರೀಮು ಚೀಪಿ

ನಾಲಿಗೆಯನು ಬಣ್ಣಗೊಳಿಸಿ

ನೆಲ್ಲಿಗೆ ಬಾಯಿಟ್ಟು ನೀರು ಕುಡಿದ


ಎಲ್ಲಿ ಕಳೆದು ಹೋದವೋ 

ಆ ಕಳೆದ ದಿನಗಳು

ಮರುಕಳಿಸಿ ಬಾರದೇಕೊ

ಆ ಸಿಹಿಯ ಕ್ಷಣಗಳು


ಮರಕೋತಿ, ಐಸ್ಪೈಸ್‌

ಜೂಟಾಟ, ಕಳ್ಳ ಪೋಲಿಸ್‌

ಬುಗುರಿ ಗುನ್ನ, ಗೋಲಿಯಾಟ

ಕತ್ತರಿ ಸೈಕಲ್ಲು ಕಲಿತ 


ಎಲ್ಲಿ ಕಳೆದು ಹೋದವೋ 

ಆ ಕಳೆದ ದಿನಗಳು

ಮರುಕಳಿಸಿ ಬಾರದೇಕೊ

ಆ ಸಿಹಿಯ ಕ್ಷಣಗಳು


ಹರಿಕತೆ ,ಬೀದಿ ನಾಟಕಗಳು

ಗಣೇಶೋತ್ಸವದ ಆರ್ಕೆಸ್ಟ್ರಾಗಳೋ

ಓಮ್ಮೊಮ್ಮೆ ಅಣ್ಣವರ ಚಿತ್ರಗಳೋ

ಬನ್ನೇರುಘಟ್ಟದ ಸೈಕಲ್ಲು ಟ್ರಿಪ್ಪುಗಳೋ


ಎಲ್ಲಿ ಕಳೆದು ಹೋದವೋ 

ಆ ಕಳೆದ ದಿನಗಳು

ಮರುಕಳಿಸಿ ಬಾರದೇಕೊ

ಆ ಸಿಹಿಯ ಕ್ಷಣಗಳು

- ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನಸುಗಳು

ಉಗಾದಿ

“ಕಳೆದ” ಸ್ನೇಹ