ಗುರು
ತಿಳಿಯದ ತಿಳಿಸಿ ಪೇಳ್ದವನೇನ್ ಗುರುವು?
ತಿಳಿದಿಲ್ಲವೆಂಬುದನೆ ತಾನರಿಯದವ - ಅವ
ಕೇಳ್ದವಗೆ ಉತ್ತರವ ಕೊಟ್ಟವನೇನ್ ಗುರುವು?
ಉತ್ತರವ ಹುಡುಕಿಸುವವನೆ ನಿಜದಿ ಗುರುವು॥
ತಿಳಿದಿಲ್ಲದವ ತಿಳಿವಿಲ್ಲವೆಂತಿಳಿಯದವ
ತಿಳಿಹೇಳೆ ಗೋರ್ಕಲ್ಲ ಮೇಲ್ಮಳೆ ಸುರಿದಂತೆ।
ತಿಳಿದಿಲ್ಲದವ ತಾ ತಿಳಿದಿಲ್ಲೆಂದರಿತು ಕೇಳೆ
ತಿಳಿ ಹೇಳೆ ಸಾರ್ಥಕವು ತಿಳಿಯದವಗೆ॥
ತಿಳಿದು ತಿಳಿಯದಂತೆ ನಿದ್ರಿಸಿದವಗೆ
ಎಬ್ಬಿಸಿ ತಿಳಿಯಾಗಿಸುವವ ಗುರುವು।
ತಿಳಿದು ತಿಳಿದಿರುವುದನರಿತವಗೆ ಶರಣು
ಅವನೆ ನಿಜದಿ ಗುರುವು ತಿಳಿಯೊ ಜಾಣ॥

ಅಧ೯ ಪೂಣ೯
ಪ್ರತ್ಯುತ್ತರಅಳಿಸಿToo deep sir, very nice. Sort of wake up call to me!
ಪ್ರತ್ಯುತ್ತರಅಳಿಸಿ