ಪ್ರತಿಬಿಂಬ
ಚಿತ್ರ ಕೃಪೆ: ಶ್ರೀ ಹರ್ಷ ಶಂಕರನಾರಾಯಣ
ಗಗನ ಚುಂಬಿತ ಪರ್ವತಶೃಂಗ
ಶೃಂಗಕಂಟಿದ ನೀಲಿಯ ರಂಗ
ರಂಗನು ಅಣುಕಿಸುವ ಪ್ರತಿಬಿಂಬ॥
ಬಿಂಬವೇನ್ಹುಸಿಯೋ ಬಿಂಬವು ಸತ್ಯ
ಸತ್ಯಕೇನು ಸರಿಸಾಟಿಯ ಮಿತ್ಯ
ಮಿತ್ಯವಿದಾದರೆ ಸತ್ಯವದೆಲ್ಲಿ?
ಇಲ್ಲಿಯ ನೋಟವು ಮನದಿ ಭ್ರಮೆಯೋ
ಭ್ರಮೆ ಇದಾದೊಡೆ ಮೂಲವ ಹುಡುಕೆ
ಹುಡುಕುವುದೆಲ್ಲಿ ಬಾನೋ ಮನವೋ॥
ಮನದಲಿ ಶಾಂತಿಯ ತಿಳಿ ತಿಳಿ ನೀರು
ನೀರದು ಕದಡದೆ ನಿಲ್ಲಲು ಸ್ಥಿರವು
ಸ್ಥಿರ ನೀ ಜಾಣ ಮಾಯೆಯ ಕಾಣೋ॥
- ನಾ ಶ್ರೀ ಮೋ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ