ಬಾಡಿಗೆಯ ಮನೆ

 


ಬಾಡಿಗೆಯ ಮನೆ ಇದು
ಕೆಲಕಾಲ ತಂಗುವೆವು।
ಮೆರೆಯುವೆವು ನಮದೆಂದು
ಸಿಂಗರಿಸಿ ನನದೆಂದು॥

ಸುಣ್ಣ, ಬಣ್ಣಗಳಿರಬೇಕು,
ಕಾಲ ಕಾಲಕ್ಕೆ ದುರಸ್ತಿ।
ವೆಚ್ಚವೆಲ್ಲೆ ಇದ ನೀನು
ಹೆಚ್ಚೆನದೆ ವ್ಯಯಿಸಬೇಕು॥

ಬರಿಬಾಡಿಗೆಯ ಮನೆಗೇಕೆ
ಈ ದುಬಾರಿ ಖರ್ಚುಗಳು?
ತರ ತರದ ತೋರಿಕೆಯು
ಥಳುಕು, ಬಳುಕಿನ ಆಟ?

ಕಾಲವಿದದರ ಬಾಡಿಗೆಯು
ಕಾಲ ಕಾಲಕ್ಕೆ ಕೊಡುತಿಹೆವು।
ಕಾಲ ಮುಗಿದಂತೆ 
ಓಡಿಸಿ ಖಾಲಿಮಾಡೆನ್ನುವರು॥

ಇದ್ದ ಕೆಲ ದಿನದಲ್ಲಿ
ನೆರೆಯವಗೆ ಹೊರೆ ಬೇಡ। 
ಹಗೆ ಬೇಡ, ನಗೆ ಚಲ್ಲು
ಜಾಣ ನೀ ಬಾಡಿಗೆದಾರನಾಗು॥

- ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ