ಹಣತೆ

 

Click here for audio recitation


ಕತ್ತಲಿನಾ ಸತ್ಯಕ್ಕೆ ಬೆಳಕೆಂಬ ಮಿತ್ಯ

ಏನಿಲ್ಲದಿರೆ ನಿಗೂಡವಾಗಿ ಇದ್ದದ್ದು

ಒಮ್ಮಿಂದೊಮ್ಮೆ ಏನೋ ಕರಗಿಸಿ ಸೋಲಿಸಿ

ಸ್ಪಶ್ಟತೆಯ ಕಲ್ಪಾನಾ ಲೋಕಕ್ಕೆ 

ಕರೆದೊಯ್ವ ದೀಪ ನನ್ನ ಹಣತೆಯ ದೀಪ


ತನ್ನಡಿಗೆ ಕತ್ತಲಿನ ಮೆಟ್ಟನ್ನು ಹಚ್ಚಿ

ಸುತ್ತಲಿಗೆ ಬೆಳಕೆಂಬ ಭ್ರಮೆಯ ಚೆಲ್ಲಿ

ನೋಡಿದ್ದ ನಂಬೆಂದು ತಿಳಿಯಹೇಳುತ

ತೋರಿಸಿ ನಂಬಿಸಿ ಸಾಂತ್ವನಗೊಳಿಸುವ

ಭರವಸೆಯ ದೀಪ ನನ್ನ ಹಣತೆಯ ದೀಪ


ಬರಿಯ ಮಣ್ಣಿನ ಬಟ್ಟಲು ನೀನಾಗಿದ್ದು

ಎಣ್ಣೆ ಬತ್ತಿಯ ತುಂಬಿ ಬಳಕುತ್ತ ಬೆಳಕಿತ್ತು

ಮಾಯೆಗೆ ಸಿಲುಕಿಸಿ ಸಂತಸವನೀಯುತ್ತ

ಹೆದರದಕೆ ಹೆದರಿಸಿ ಧೈರ್ಯವನು ತುಂಬುವಾ

ಕಪಟಿ ನೀನಾದೆ ನನ್ನ ಹಣತೆಯ ದೀಪ


ದೀಪವೋ ನೀ ನಿರ್ಮಿಸಿದ ಬೆಳಕಿನಾ ದ್ವೀಪವೋ

ಸುತ್ತಲಿನ ಕತ್ತಲು ಕಡಲೋ ಕಾರ್ಮುಗಿಲೋ

ವಿಸ್ತಾರವೇನೋ ಕಡಲು  ಮುಗಿಲಿಗೆ

ಬಂಧಿಸಿ ಬಿಡಗೊಡದೆ ಬಿಗಿದಪ್ಪಿ ನಿಲ್ಲಿಸಿ

ಹಿಡಿದಿಟ್ಟಿರುವ ದೀಪ ನನ್ನ ಹಣತೆಯ ದೀಪ


ಉರಿಉರಿದು ಕರಗುತ್ತ ಮೆಲ್ಲನೆ ನೀ ಜಾರುತ್ತ

ನಿನ್ನಾಟ ಮುಗಿಸಿ ಕತ್ತಲಿಗೆ ದೂಡುತ್ತ

ನನ್ನ ಪರಿವೆಯೆ ಇರದೆ ನೀ ದೂರ ಸರಿದೆ

ಮತ್ತೆ ಕವಿಯಿತು ಸುತ್ತಲಿಗೂ ಕಪ್ಪನೆಯ ಸತ್ಯ

ಕಣ್ಮರೆಯಾದೆಯಾ ಜಾಣ ಹಣತೆಯ ದೀಪ

- ನಾ ಶ್ರೀ ಮೋ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ