ಸುರಗಿ

Sunset at Kumta Kadale beach near Suragi homestay

 Press here for the recitation  

Meaning of Suragi (ಸುರಗಿ). 
Suragi is a mix of water with kumkum and Arishina (Turmeric) which is used to give bath during a marriage ceremony. Which has a colour which resembles the colour of a setting sun. Suragi snaana or bath is a ritual prevalent in the North karnataka areas.
It is also a kind of Flower. As this flower dries up it gets more fragrant. More prevalent in the Malnad region.
Suragi in Kodava region is a sharp dagger like weapon used to stab. 

ದಿನದ ದಿನಚರಿಯು, ಭುವಿಗೆ ದೀವಿಟೆಯು

ದಿನಕರನ ದಿನಮುಗಿವುದೇನ್‌ ಈ ನಮ್ಮ ಲೋಕದೊಳು?

ಇಲ್ಲಿಯ ಬಾನಿಗಿಂದು ಸುರಗಿಯ ಮಾಡೆ

ದಿನ ಮುಗಿಯಿತೇನವಗೆ ದಿನ ಮುಗಿಯಿತೇ?


ಮೂಡಣದಿ ಮೂಡಿದವ ಮೇಲ್ಮೇಲೆ ಏರಿದವ

ನೆತ್ತಿಯಮೇಲ್ನಿಂತಿದವ ಪಡುವಣಕೆ ಓಡಿದವ

ನಿಮಿಶದಿಂನಿಮಿಶಕ್ಕೆ ದಣಿಯದೆ ನಡೆದನವ

ದಿನ ಮುಗಿಯಿತೇನವಗೆ ದಿನ ಮುಗಿಯಿತೇ?


ಕಾರ್ಮೋಡ ಮುಸುಕಿರಲು ಅದರಹಿಂದಡಗಿದವ

ಕರಗಿಸಿಯೊ ಅದ ಕರಗುವವರೆಗೆ ಕಾಯುವವ

ನಿತ್ಯದುಯಿಸಿ ಮುಂಜಾನೆ, ಸಂಜೆಗೆ ಮುಳುಗುವವ

 ದಿನ ಮುಗಿಯಿತೇನವಗೆ ದಿನ ಮುಗಿಯಿತೇ?


ಸುರಗಿಯಂತವ ಸೊರಗಿದರು ಸೂಸುವವ

ತನ್ನ ಬೆಳಕಿನ ಕಂಪ ತಂಪಾಗಿಸಿ ಕೆಂಪಿದವ

ಬಾಡುತಲಿ ಪರಿಮಳವ ಹೆಚ್ಚಿದವಗೆ

ದಿನ ಮುಗಿಯಿತೇನವಗೆ ದಿನ ಮುಗಿಯಿತೇ?


ಕತ್ತಲಿನ ಕಪ್ಪನ್ನಿರಿದ ಬೆಳಕಿನಾ ಚೂರಿಯಿದು

ಸುರಗಿಯಂತೆ ಬಲು ಮೊನಚಿನ ರಶ್ಮಿಗಳು

ಇರಿಯುತ್ತ ತಿವಿಯುತ್ತ ಕತ್ತಲನು ಓಡಿಸುವವಗೆ

ದಿನ ಮುಗಿಯಿತೇನ್ಜಾಣ ದಿನ ಮುಗಿಯಿತೇ?

- ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ