ಯುದ್ಧ

 


 ಯುಗಯುಗಕೆ ಮರುಕಳಿಸಿಬರುವವು ಯುದ್ಧಗಳು|

ಹಗೆತನವೋ, ಅಹಂಕಾರ, ಪ್ರತೀಕಾರದ ನೆಪವು।

ಅವರಿಬ್ಬರೂ ನಾಯಕರು, ನಾವು ಹಿಂಬಾಲಕರು|

ಆ ಪಕ್ಷವೀ ಪಕ್ಷಕ್ಕೆ ನಾವುಗಳು ಸೇರಿದವರು॥


ಎಂದೂ ಚದುರಂಗಾಟದಲಿ ಸೈನಿಕನಿಗೇನು ಬೆಲೆ?

ಬಲಿಕೊಟ್ಟು, ತಗೆದು ಸೇರುವ ಕಾಯಿ ಮೂಲೆ।

ಕುದುರೆ, ಆನೆ, ಓಂಟೆ ಅವರಿಗಿಂತಲು ಮೇಲೆ।

ಮುನ್ನುಗ್ಗುವ ಒಂದಡಿಯಿನ ಬರಿಯರಚುವ ತಲೆ॥


ಕೊನೆಗೊಮ್ಮೆ ಎಂದೋ ಮುಗಿಯುವುದೀ ಯುದ್ಧ।

ಯಾರೊ ಅವರಲಿ ಸೊತ ಮತ್ತೊಬ್ಬ ಗೆದ್ದ।

ಹಗೆತನದ ಹೊಗೆ ಹೋಗಿ ಸವರಿದರು ಸ್ನೇಹದ ಮದ್ದು

ಕ್ಷೀಣಿಸಿತು ಗದ್ದಲಗಳು, ನಿಂತಿತು ಕಹಳೆಯ ಶಬ್ಧ॥


ಕಾಯುತ್ತಿದ್ದಳು ಮುದಿಯೊಬ್ಬಳು ನೋಡಲು ಸತ್ತ ಮಗನ।

ಹರೆಯದ ಹೆಂಗಳು ಹಂಬಲಿಸಿ ಹಾ-ತೊರೆದರು ಹುತಾತ್ಮ ಪ್ರಿಯತಮನ।

ತಬ್ಬಲಿಯ ಮಕ್ಕಳು ಕೊಳ್ಳಿಟ್ಟರು ಅಪ್ಪನ ಚಿತೆಗೆ।

ಅಂತೂ ಕೊನೆಯಾಯಿತೆ ಈ ಎಲ್ಲ ವ್ಯಥೆಗೆ॥


ಮುಗಿಯಿತು ಈ ಯುದ್ಧ, ಬರಲಿ ಸತ್ತವರಿಗೆ ಸ್ಮಾರಕ।

ವರುಷಕ್ಕೊಮ್ಮೆ ನೆನೆದು ಹೂಗುಚ್ಚವಿಡಲಿ ನಾಯಕ।

ಮುಗಿಯಿತಲ್ಲ ಸಧ್ಯಕ್ಕೆ ರಕ್ತ, ಕಣ್ಣೀರಿನ ಅಭಿಷೇಕ।

ನಾಯಕರು ದೇವರುಗಳು ಅವ ಜಾಣ ನಮ್ಮ ಪೋಷಕ॥

- ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ