ಕರ್ಮ ಕಾಲಚಕ್ರ

 


🔊 Click here for audio recitation

ಇದೇನು ವಿಸ್ಮಯವು, ಏನು ವಿಪರ್ಯಾಸ

ಕಾಲಗಳಲಿ ಎಂದು ಕಾಲ ತೂರುವುದೋ?


ಎನ್ನ ಭೂತಗಳೆಲ್ಲ ಇಂದು ವರ್ತಮಾನಗಳಾಗಿ

ಭವಿಷ್ಯದ ಮೆಲೆ ಬೆಳಕು ಛಾಯೆಗಳ ಚೆಲ್ಲುತ್ತ

ಕಾಲಚಕ್ರವಿದೆಂದು ತಿರುತಿರುಗಿ ತಿರುಗಿಸಿ

ಇದೇನು ವಿಸ್ಮಯವು, ಏನು ವಿಪರ್ಯಾಸ

ಕಾಲಗಳಲಿ ಎಂದು ಕಾಲ ತೂರುವುದೋ?


ಭೂತಕಾಲದ ಕಂಥೆಗಳು, ಕಥೆ, ಖಾಂಡಗಳು

ಅದನಂದು ಬರೆಯಲು ಅದರ ಪ್ರೇರಣೆಯೇನು?

ಅದರ ಹಿಂದಿನ ಕೃತ ನನ್ನ ಅಂದಿನ ಕರ್ಮಗಳೇನು?

ಇದೇನು ವಿಸ್ಮಯವು, ಏನು ವಿಪರ್ಯಾಸ

ಕಾಲಗಳಲಿ ಎಂದು ಕಾಲ ತೂರುವುದೋ?


ವರ್ತಮಾನದ ಮಾನದಂಡವು ಅದೇನು?

ಮುಂಬರುವದಕೆ ಇದು ನಾಂದಿಯು।

ಮುನ್ನಡೆವುದೆಲ್ಲಕೂ ಇದು ಕಾರಣವಾಗೆ

ಇದೇನು ವಿಸ್ಮಯವು, ಏನು ವಿಪರ್ಯಾಸ

ಕಾಲಗಳಲಿ ಎಂದು ಕಾಲ ತೂರುವುದೋ?


ಭವಿಷ್ಯವ ಕಳೆತು ಬಲ್ಲವ ನಾನು

ಅದು ಇಂದು ನಡೆದ/ರೆಲ್ಲ ಫಲವು

ಇಂದು ನಡೆವುದೆಲ್ಲ ನಿನ್ನೆಯ ಕರ್ಮಗಳು

ಇದೇನು ವಿಸ್ಮಯವು, ಏನು ವಿಪರ್ಯಾಸ

ಕಾಲಗಳಲಿ ಎಂದೂ ಕಾಲ ತೂರುವುದು ಜಾಣ

- ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ