ಎಂತಹ ಚೆಲುವು?

 



ಅದೇ ಬೆಟ್ಟ ಅದೇ ಕಣಿವೆ

ಸ್ಥಿರವೆಲ್ಲವೀ ಜಗವು|

ಜಗದ ಜಂಗಮಕೆ

ರವಿಯ ಕಾಂತಿ॥


ಅದೇ ಬೆಳಕು ಅದೇ ಛಾಯೆ

ದಿನ ದಿನಕೆ ಬರುವುದು|

ಸ್ಥಾವರದ ಸಾಗರಕೆ

ಭುವಿಯ ಶಾಂತಿ


ಅದೇ ಉಸಿರು ಒಳಹೊರಗು

ಮನದ ವಿಪ್ಲತೆಯು|

ಬಹು ಭಾರವೀಮನಕೆ

ಕವಿಯ ಭ್ರಾಂತೀ


ಅದೇ ಅಕ್ಷರ ಪದಗಳೋ

ಪದ ಪೋಣಿಸುವಾಟ|

ಕವಿಯ ಕಲ್ಪನೆಗೆದರಿ

ಆದ ಜಾಣ ವೇದಾಂತಿ 

  • - ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ