ಕಳೆದದು ಸಿಗುವುದೇ?
ಬಾನಿನಲ್ಲಿ, ರಾತ್ರಿಯಲ್ಲಿ ಚುಕ್ಕಿ ಎಣಿಸುತಿದ್ದೆವು।
ಬಾವಿ ಸೇದಿ, ನದಿಗೆ ಹೋಗಿ ಸಿಹಿನೀರ ಕುಯುತ್ತಿದ್ದೆವು।
ನಡೆದು ಹೋಗಿ, ಸೈಕಲ್ಲು ತುಳಿದು ಸುತ್ತಲೆಲ್ಲಾಡುತ್ತಿದ್ದೆವು।
ಹಿತ್ತಲಿನ ಸೊಪ್ಪು,ಹಣ್ಣು ಕಾಯಿಯುಣ್ಣುತ್ತಿದ್ದೆವು॥
ಮೊರದಿ ಅಕ್ಕಿ ಧಾನ್ಯಗಳ ಅಂಗಳದಿ ಕೇರುತಿದ್ದೆವು।
ಪುಟ್ಟ ಪಕ್ಷಿ ಗುಬ್ಬಿ ಹಾರಿ, ಕುಣಿದು ಗೂಡಕಟ್ಟುತ್ತಿದ್ದವು।
ಸಮಯವಿತ್ತು ಹತ್ತು ಜನಕೆ ಹರಿಕಥೆ, ಹಾಡ ಕೇಳಲು।
ಪಕ್ಕದ ಮನೆಯಾಕೆ ಹಳೆಯ ನೆಂಟರಂತೆ ಪರಿಚಯ॥
ಅಂದಿನಕೂ ಇಂದಿನಕೂ ಏಕೆ ಇಷ್ಟು ಅಂತರ!
ಕಾಲ ಬದಲು ಆಯಿತೆ? ನಾವೇನು ಅದಕೆ ಕಾರಣ?
ನಮ್ಮ ಕೈಲಿ ಏನಿದೇ? ಇದಕೆ ಬೇಕೆ ಕಾತರ?
ಏಳಿಗೆ ಇದು ಸಾಗಿದೇ, ಹೀಗೆಯೇ ನಿರಂತರ॥
ಭೂಮಿ ತಾಯಿ ಹೆಸರುವಾಸಿ ಎಂದು ತನ್ನ ತಾಳ್ಮೆಗೆ।
ಅದನ ಮೀರಿ ನಡೆದಿಹವೇನು ನಮ್ಮ ಅಂತ್ಯಕೆ?
ಬೆಳಕ ಕಲುಷ ರಾತ್ರಿಯಲ್ಲಿ, ಜಲಭೂ ಮಾಲಿನ್ಯವೂ।
ಬಿಡಲಿಲ್ಲ ನೀರು, ನೆಲ, ವಾಯು ಸುತ್ತಲಿನ ಎಂತವೂ॥
ನಾನು ಮಾಡ ಬಹುದದೇನು, ನಿಂತು ಒಮ್ಮೆ ಎಂದರೆ।
ಹೊಳೆವುದು ಅನೇಕ ಮಾರ್ಗ, ಇರಲಿಸ್ವಲ್ಪ ತೊಂದರೆ।
ದಿನನಿತ್ಯದ ಅಳವಡಿಕೆಯು ಇಳಿಸುವುದವಳ ಭಾರವ।
ನನ್ನ ಅಳಿಲು ಸೇವೆಯಿರಲಿ ಆ ಎನ್ನ ಭೂ ಮಾತೆಗೆ॥
ಪ್ಲಾಸ್ಟಿಕ್ಕು ಬೇಡ ಬಟ್ಟೆ ಚೀಲವಿರಲಿ ಮಾರ್ಕೆಟ್ಟಿಗೆ ಹೋದರೆ।
ಹದಿನೆಂಟು ಏಕೆ ಏಸಿಗೆ ಇರಲಿ ಇಪ್ಪತ್ತು ನಾಲ್ಕಿಗೆ।
ನೆಲ್ಲಿ ನಿಲಿಸಿ ತಡೆಯಿರಿ ಸೋರುವಿಕೆಯ, ಆರಿಸಿ ಬೇಡದೀಪವ।
ಜಾಣ ನೀವು ನಾವು ಎಲ್ಲ ಹುಡುಕಿ ಕಳೆದುದೆಲ್ಲವ॥
- ನಾ ಶ್ರೀ ಮೋ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ