ಕವನ

 



🔊Audio link

ನಾ ತಿಳಿಯದೆ ಬರೆವೆನೇನ್ಕವನವನು

ಅದೆ ಹೊರ ಹೊಮ್ಮುವುದೋ

ಅಂತರಾಳದ ತುದಿತ ಉಕ್ಕುವುದೊ

ನಾ ತಿಳಿಯದೆ ಬರೆವೆನೇನ್ಕವನವನು?


ಮನದ ಭಾವನೆಗಳ ಹೊರದೂಡಲಿಚ್ಚೆಯು

ಒಮ್ಮೊಮ್ಮೆ ಝರಿಯಂತೆ ಹರಿಯುವುದು

ದುಮುಕುವುದು ಎತ್ತರದ ಜಲಪಾತದಂತೆ

ನಾ ತಿಳಿಯದೆ ಬರೆವೆನೇನ್ಕವನವನು?


ಪದ ವಾಕ್ಯ  ಜೋಡಿಸುವ ಚಾಣಾಕ್ಷ

ವ್ಯಾಕರಣ ಛಂದಸ್ಸು ಪ್ರಾಸಗಳ ಪರಿಹಾಸ

ಭಾವನೆ ಅನಿಸಿಕೆಗಳನಿವಾರ್ಯ ಅರಿವುಗಳು

ನಾ ತಿಳಿಯದೆ ಬರೆವೆನೇನ್ಕವನವನು?


ಸುರಿವುದು ಜಿನುಗು ಮಳೆಯತೆರೆ ಎಡೆಬಿಡದೆ

ಕರಗಲಾರವು  ಕಪ್ಪು ಮೋಡಗಳು

ಅದಾವ ಕಡಲ್ಲಿಂದ ಏನ ಹೊತ್ತು ತಂದಿಹುದೋ

ನಾ ತಿಳಿಯದೆ ಬರೆವೆನೇನ್ಕವನವನು?


ಬಿಳಿಯ ಹಾಳೆಗೆ ಕಪ್ಪು ಶಾಯಿಯಾ ಮಚ್ಚೆಗಳು

ಇಚ್ಚಿಸದೆ ಹೊರಚೆಲ್ಲಿದಾ ಸತ್ಯಗಳು

ಮನತೆರೆದ ಜಾಣನಾ ವಾಕ್ಯಗಳು

ನಾ ತಿಳಿಯದೆ  ಬರೆದೆನೇನ್ಕವನವನು।

- ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ