ಮೊದಲೆಲ್ಲಾ ಹೊಸತು

 


ಬಿಟ್ಟಾಯಿತು ಬಿಗುಮಾನದಿ ಹಳೆದೆಂದು

ಹಸನಾಯಿತು ಹೊಸೆದೆಲ್ಲ ಹೊಸತು

ಬಣ್ಣ ಬಳಿಸಿ ಹೊಳಪನು ಥಳಥಳಿಸಿ

ಮೆರಗು ಮೆತ್ತಿ ತಿರುಗಾಡುತಲಿ

ಮೊದಮೊದಲೆಲ್ಲಾ ಹೊಸತು॥


ನಿದ್ರಾದೇವಿ ಮಡಿಲಿನ ಕೂಸೆ

ಕನಸುಗಳಿವು ಕಣ್ಣಳರಳಿಸಿ ನೋಡೆ

ಹಳೆಯ ನೆನಪುಗಳು ಹೊಸದವತರಿಸಿ

ನಿತ್ಯನೂತನವಿದೆಂದೆನಿಸಿ

ಮೊದಮೊದಲೆಲ್ಲಾ ಹೊಸತು॥


ನಿನ್ನೆ ಮೊನ್ನೆಯದೆಂತೆಂದು ಗೊಣಗಿ

ನಾಳೆಗಳ ರುಚಿಗಳಿಗಿಂದು ಒಣಗಿ

ಜಾಣನು ತಾನೆಂದೆನುತ ಪೊಗಳಿ

ಹೊಸದೆಂದೆನುತ ಹಳೆಯದೆಲ್ಲವ ತಳ್ಳಿ

ಮೊದಮೊದಲೆಲ್ಲಾ ಹೊಸತು॥

- ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾಲ

ಮರ

ಅಗಲಿಕೆ