ನೀರು ನದಿ
ನೀರು ನದಿ
ತಿಳಿ ತಿಳಿಯ ನೀರು
ಝುಳ ಝುಳನೆ ಹರಿದು
ದಬ ದಬದಿ ದುಮುಕಿ
ಎಡಬಲಕೆ ತಿರುವಿ
ಹರಿದಿದೇ ನೋಡು
ನೀಳದಾ ನದಿಯು
ಸರ ಸರದಿ ಹರಿವ
ಸರಸಕೆ ಸಂದ ಸಂಕಟವು
ಕರಿ ಕರಿಯಂತಿದ್ದ ಅಣೆಕಟ್ಟು
ಅಡ್ಡವಾಗಿಸಿ ಅಡ್ಡಾಡಗೊಡದ
ನಿಂತಿದೇ ನೋಡು
ಶಾಂತತೆಯ ಮಡುವು
ಗಿರ ಗಿರನೆ ತಿರುವ
ಸುಳಿ ಸುಳಿಯ ನೀರು
ಎಳೆ ಎಳೆದು ಒಳಗೆ
ಒಳ ಒಳಗೆ ಒಯ್ದು
ಕರಿ ಕಪ್ಪು ಕಾಣದೇನು
ಬಲು ಘನವು ತಿಳಿಯ ನೀರು
ದಮ ದಮನೆ ದುಮುಕು
ಬುಳ ಬುಳನೆ ಬಳುಕು
ತೆಳು ತೆಳುವ ತಳೆದು
ಜಲ ಜಾಲಕೆ ಜಾರು
ಅಲೆ ಅಲೆದು ಅಲೆಯಾಗು
ಜಗದೊಳು ಜಾಣ ಜಲವಾಗು
- ನಾ ಶ್ರೀ ಮೋ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ