ತಡ

 



ನಿನ್ನೆಯತನಕ ನಲಿದಾಡುತ್ತಿದ್ದ

ಬಲು ಮೋಜಿ ಗೆಳೆಯನೊಬ್ಬ

ಇದ್ದಿಕ್ಕಿದ್ದಂತೇನಾಯಿತೊ ತಿಳಿಯೆ

ವಾಟ್ಸಾಪ್‌ನಲ್ಲಿ ಅವನು ಸ್ತಬ್ಧ


ಬಂದದ್ದೆಲ್ಲ ಫಾರ್ವರ್ಡು 

ಪ್ರತಿ ವಿಷಯಕ್ಕೂ ಟೀಕೆ ಟಿಪ್ಪಣಿ

ಮರೆಯುತ್ತಿರಲ್ಲಿಲ್ಲ ಯಾರ ಹುಟ್ಟುಹಬ್ಬ

ಮರೆತನಲ್ಲ ಇಂದೇಕೊ ಎಂದನೊಬ್ಬ


ಬಹುಮುಖ ಪ್ರತಿಭೆ ಬಣ್ಣದ ವ್ಯಕ್ತಿ

ಸಂಗಿತನಾಟಕಕ್ರಿಕೆಟ್ಟುಇಸ್ಪೀಟು

ಗುಂಪಿನಲಿ ಇವನಿಗೆ ಸರಿಸಾಟಿಯಿಲ್ಲ 

ಹೋಗದ ಹೋಟೇಲ್ಲಿಲ್ಲ ಇವ ತಿಂಡಿಪೋತ


ಬೀದಿಯಲ್ಲಿ ಸಿಕ್ಕರೆ ಯಾರಾದರೂ

ತಿಳಿದಿಲ್ಲದಿರಲಿ ಪರಿಚಯಿಸಿಕೊಂಡು

ಬೆರೆಯುವ ಮನಸು ನಿಶ್ಕಪಟಿ

ತಿಳಿದಿದ್ದವರಿಗೆ ಸಿಕ್ಕು ಕೊರೆಯುವವನು


ಸಂತಸಸಂತಾಪಗಳಿಗೆಲ್ಲ ಇವ ಮುಂದು

ಹಿಂತಿರುಗದೆ ಸಹಾಯಕ್ಕಿಳಿವ ತನ್ನವರೆಂದು

ನಕ್ಕು ನಲಿಸುವ ಮಕ್ಕಳಿಗೆ ಮಾಮ ತಾತನೆಂದು

ಸದಾ ಹಸನ್ಮುಖಿಇರುವನಿತರರಿಗೆಂದು


ಸುದ್ಧಿಯೇ ಇಲ್ಲವಲ್ಲ ಎಲ್ಲಿಹನೋ ಇವನು

ಏನಾಗಿದೆಯೋ ಇವಗೆ ಮೆಸೇಜುಗಳಿಲ್ಲ 

ಯಾರಿಗೂ ಇತ್ತೀಚೆಗೆ ಅವ ಕಾಣಲಿಲ್ಲ

ಎಲ್ಲಿ ಅಡಗಿಕುಳಿತಿಹನೋ ಅಡಗಿಸಿ ಸೊಲ್ಲ


ಇತರಿಂದ ಇರುವ ವಿಳಾಸವ ತಿಳಿದೆ

ನೋಡಲನವ ಹೇಳದೆಯೆ ಹೊರಟೆ

ನೋಡಲೇಬೇಕೆಂದು ಮನದಲಿ ಹಠ

ಅಷ್ಟರಲ್ಲಾಗಲೇ ಅವನು ಗೋಡೆಯಮೇಲಿನ 

ಚಿತ್ರ ಪಟ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾಲ

ಮರ

ಅಗಲಿಕೆ