ಗುಲಾಬಿ

 

ಗುಲಾಬಿ

ನಮ್ಮ ಮನೆಯ ಗುಲಾಬಿ

ಅತಿ ಚಂದಬಲು ಮುದ್ದು

ಅದೆಂತಹ ಬಣ್ಣಕಣ್ಣಿಗಾನಂದ

ಮೊಗ್ಗಾಗಿರಲಿ ಅರಳಿರಲಿ 

ದಿನದ ದಣಿವಿಗೆ ಮದ್ದು

ನಮ್ಮ ಮನೆಯ ಗುಲಾಬಿ


ತೋರಹತ್ತಿದೆ ನಾನು

ಮನೆಮಂದಿನೆರೆಹೊರೆಗೆಲ್ಲ

ನನ್ನದಲ್ಲವೆ ಗುಲಾಬಿ

ನಾನು ಬೆಳೆಸಿದ ಹೂವು?

ನಮ್ಮ ಮನೆಯ ಗುಲಾಬಿ!


ಕಂಡವರಿಗೆ ಕೆಣಕಿತೊ

ಇದ್ದ ಮುಳ್ಳು ಚುಚ್ಚಿತೋ

ಹೊಟ್ಟೆಕಿಚ್ಚೆದ್ದಿತೋ

ಹಗರಣಕ್ಕಾಯಿತು

ನಮ್ಮ ಮನೆಯ ಗುಲಾಬಿ!


ಗುಲಾಬಿ ಗಿಡದಲ್ಲೇಕೆ?

ಹೆಣ್ಣ ಮುಡಿಗೋದೇವನಡಿಗೋ

ಸಲ್ಲಬೇಕಾದ್ದ ಕುಸುಮವದು

ಕಿತ್ತು ಉಪಯೋಗಿಸ ಬೇಡವೆ

ನಮ್ಮ ಮನೆಯ ಗುಲಾಬಿ!


ಅದೇಕೋ ಮನ ಒಲ್ಲೆಂದಿತು

ಕೀಳ ಬೇಕೇನಿದನು?

ಇದ್ದಲ್ಲಿದ್ದರೆ ಇನ್ನು ಚಂದಲ್ಲೇನು?

ಕೀಳಲಾರೆನಾನು 

ನಮ್ಮ ಮನೆಯ ಗುಲಾಬಿ!


ನೋಡ ನೋಡುತ್ತಿದ್ದಂತೆ

ಬಾಡತೊಡಗಿತು ಸೊರಗಿ

ಬಣ್ಣ ಮಾಸಿದಳ ಉದುರಿ

ಬೀಳ ತೊಡಗಿತು ಏಕೋ

ನಮ್ಮ ಮನೆಯ ಗುಲಾಬಿ!


ಕಣ್ಣೀರು ಸುರಿಸಿ ನೊಂದೆನಾನು

ಹೀಗೇಕಾಯಿತೋ ತಿಳಿಯೆ

ನನ್ನೆದುರಿಗೆ ಮಾಯವಾಯಿತೆ

ನಮ್ಮ ಮನೆಯ ಗುಲಾಬಿ?


ಕಾಯುತ್ತಿದ್ದೆನು ನಾನು

ಮತ್ತೊಂದು ಹೂವಿನ ಬೀಡಿಗೆ

ಜಂಬವಡಗಿ ಸುಮ್ಮನೆ ಕುಳಿತೆ ನಾನು

ಇರಲಿಲ್ಲವಲ್ಲ.... 

ನಮ್ಮ ಮನೆಯ ಗುಲಾಬಿ!


ಹೂವಿರದ ಗಿಡವೆಂದು

ಬರಿಯ ಮಳ್ಳಿನ ಗಿಡಕೆ

ನೀರುಣಿಸಿ ಆರೈಕೆ ನಡೆದಿತ್ತು - ಅದು

 ಗಿಡಮನೆಯ ಗುಲಾಬಿ!


ವಸಂತನಾಗಮನಕ್ಕೆ ಸಂಭ್ರಮದಿ

ಮೊಗ್ಗುಗಳು ಮೂಡಿತು ಪ್ರತಿಯ ತುದಿ

ಮತ್ತೆ ಶೋಭಿಸುತೆ ಕಂಗೊಳಿಸುತ್ತಿತ್ತು

ನಮ್ಮ ಮನೆಯ ಜಾಣ ಗುಲಾಬಿ!

  • ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ