ಯೋಗ

 


Click here for Audio recitation

ಯೋಗದ ಹೆಸರಿನಲ್ಲಿ ವರುಷಕ್ಕೊಂದು ದಿನ

ಹಾಕಿದರು ಕೆಲವರು ಎಂತೆಂತಹ ಸೋಗ!

ನಿತ್ಯ ಭೊಗಿಸುತಬೊಜ್ಜ ಬೆಳುಸಿತಲಿ

ಬಗ್ಗಲಾರದ ಬಹು ಭಾರದ ದೇಹಕೆ

ಭರದ ಒಂದು ದಿನದ ದಂಡ ಭರಿಸುವ ತವಕ!


ಫೇಸ್ಬುಕ್ಕುಇಂಸ್ಟಾವಾಟ್ಸ್ಯಾಪುಗಳಲಿ ಚಿತ್ರಗಳು

ಚಿತ್ರ ವಿಚಿತ್ರ ಉಡುಗೆಗಳ ಸೋಜಿಗವು

ಯೋಗಕ್ಕೆ ಯೋಗಒಂದು ಘಂಟೆಯು ಮಾತ್ರ

ತದನಂತರದ ಕಾರ್ಯಕ್ರಮಗಳಿದ್ದವು ಅನೇಕ!


ಅಂದಂತೂ ಹೋಟೇಲುಗಳಿಗೆ ಅದೆಂತಹ ಯೋಗ

ಮಸಾಲೆಕೇಸರೀ ಖಾರಾ ಭಾತುಗಳಿಗೀಗ ಜಾಗ!

ಇಂದಾದರೂ ಆರೋಗ್ಯವಾಗಿ ಕೆಲ ಉಣುವನೆಂದರು

 ಹೇಳಿದರು ನೀರಿನ ಪಾನೀ ಪುರಿಇಡ್ಲೀ ವಡೇ ಭಲೇ!


ಅಬ್ಬ ಮುಗಿಯಿತಲ್ಲ ವರುಷಕೆ  ಒಂದುದಿನ

ಎಂದು ನಿಟ್ಟುಸಿರಿಟ್ಟವರು ನಮ್ಮಲ್ಲಿ ಬಹಳ ಜನ

ಎಂದಿನಂತೆ ಮತ್ತೆ ನಾಳೆ ಮರಳುವುದು ಖಚಿತ

ಕೊಡಬಾರದಿತ್ತೆ ಮೂವ್‌ಐಯೋಡೆಕ್ಸ್‌  

ಜಾಣ ಆಯೋಜಕರು ಉಚಿತ?

ನಾ ಶ್ರೀ ಮೋ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ