ದೋಸೆ
ಅಹಾ ದೋಸೆ ಬಿಸಿಬಿಸಿ ದೊಸೆ
ಕಾದ ಹಂಚಿಗೆ ಚುಸ್ಸೆಂದೆನುತ
ಹರಡಿ ಹರಡಿಸಿ ವುತ್ತಾಕಾರದಿ
ವಿಧ ವಿಧವಾಗಿ ಅವತರಿಸುವ
ಅಹಾ ದೋಸೆ ಬಿಸಿಬಿಸಿ ದೋಸೆ
ಏನಿಲದಿದ್ದರೆ ಅದು ಖಾಲೀ ದೋಸೆ
ಪಲ್ಯದ ಜೊತೆಗದು ಮಸಾಲ ದೋಸೆ
ಬೆಣ್ಣೆ ಹಾಕಿದರೆ ದಾವಣಗೆರೆಯು
ಮೂರಾದರೆ ಅದು ಸೆಟ್ಟಾಗುವುದು
ಅಹಾ ದೋಸೆ ಬಿಸಿಬಿಸಿ ದೋಸೆ
ಕಾಗದದಂತಹ ಪೇಪರ್ದೋಸೆ
ಅಲ್ಲಿಲ್ಲಿದ ಪ್ಲೈನು ದೊಸೆ
ಸಾದ ಮಸಾಲೆ, ಬೆಣ್ಣೆ ಮಸಾಲೆ
ರುಚಿಕರ ನಮ್ಮ ಮೈಸೂರು ಮಸಾಲೆ
ಅಹಾ ದೋಸೆ ಬಿಸಿಬಿಸಿ ದೋಸೆ
ರವೆಯಲ್ಲಾದರೆ ರವೇ ಮಸಾಲೆ
ಕಾಳುಗಳಿದ್ದರೆ ಪೆಸರಟ್ಟದುವು
ತೆಮಿಳಗರು ಅದ ಅಡೈ ಎನ್ನುವರು
ಭಾಷೆಗಳನೇಕ ವಿಧ ವಿಧ ತರಹ
ಅಹಾ ದೋಸೆ ಬಿಸಿಬಿಸಿ ದೋಸೆ
ಮನೆಯಲಿ ರುಬ್ಬಲಿ ಹಿಟ್ಟದು ಕಲಸಲಿ
ನೇರ ಉಪಯೋಗದ readymix ಇರಲಿ
ID MTRರೋ ಮನೆಗದು ಬರಲಿ
ಮೆಂತ್ಯವೊ ಕಡಲೆಯೊ ಅವಲಕ್ಕಿಯೂ ಸೇರಲಿ
ಅಹಾ ದೋಸೆ ಬಿಸಿಬಿಸಿ ದೋಸೆ
ಕಾಯಿತುರಿಯ ಬಿಳಿ ತೆಂಗಿನ ಚಟ್ನಿ
ಕೆಂಬಣ್ಣದ ಟೊಮೇಟೊ ಚಟ್ನಿ
ಪುದೀನ ಕೊತ್ತಮ್ಮರಿಯ ಹಸಿರಾದರು ಸರಿಯೆ
ಬಣ್ಣ ಬಣ್ಣದ ಚಟ್ನಿ ದೋಸೆಗೆ ಅಣಿಯೆ
ಅಹಾ ದೋಸೆ ಬಿಸಿಬಿಸಿ ದೋಸೆ
ಏನಿಲ್ಲದಿರೆ ಇದೆ ಚಟ್ನಿಪುಡಿಯು
ಶೇಂಗಾ ಪುಡಿ ಕರಿಬೇವಿನ ಪುಡಿಯು
ಉಪ್ಪಿನಕಾಯೋ ಮಾವಿನ ತೊಕ್ಕೋ
ಕಡೆಗೆ ಜೇನು ಬೆಲ್ಲ ಜ್ಯಾಮಿನ ಸಿಹಿಯೋ
ಅಹಾ ದೋಸೆ ಬಿಸಿಬಿಸಿ ದೋಸೆ
ಪಿಜ್ಜಾ ಬರಗರ್ ಮಾಮ ಮೋಮೋ
ಪೂರಿ ಭಾಜಿ ಮಿಸ್ಸಲ ಪಾವು
ಸಾಧಾರಣ ಜಗಳಕ್ಕಾಗುವ ಉಪ್ಪಿಟ್ಟು
ಇವನೆಲ್ಲವ ಜೈಸಿ ನಿಂತಿದೆ ಮೆಟ್ಟು
ಅಹಾ ದೋಸೆ ಬಿಸಿಬಿಸಿ ದೋಸೆ
ದೋಸೆಗೇಕೆನ್ನುವರು ಡೋಸ?
ಕನ್ನಡ್ ಬಾರದ ಉತ್ತರದವರು
ತಪ್ಪಿರಬಹುದು ಉಚ್ಚಾರದಲಿ
ತಿನ್ನಲು ಅವರಿಗೂ ತೃಪ್ತೀಕರವೂ
ಅಹಾ ದೋಸೆ ಬಿಸಿಬಿಸಿ ದೋಸೆ
ಅಗ್ರಪೂಜೆಗೆ ಹೊಟೆಲ್ಲುಗಳನೇಕ
ಮಲ್ಲೇಶ್ವರವೋ ಬಸವನಗುಡಿಯೋ
ಪುರಾತನವಲ್ಲದ ನಿನ್ನೆ ಮೊನ್ನೆಯವೋ
ಇಡುವರು ಆಣೆ ಬಿಡುವರು ಪ್ರಾಣ
ಇಲ್ಲಿ ತಿಂದನುಭವಿಸುವವ ಜಾಣ
- ನಾ ಶ್ರೀ ಮೋ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ