ನಾಲಿಗೆ

 


 ಕತ್ತಿ ಬಾಣಗಳಲ್ಲ
ಶೂಲ ಈಟಿಗಳಲ್ಲ
ಬಹು ಸೂಕ್ಷ್ಮ ಬಲು ಹರಿತ
ನಾಲಿಗೆಯ ಚಾವುಟಿಯು


ಎಲುಬುಗಳಿಲ್ಲದ ಅಂಗ

ತಿರುಚುವುದು ಅರಚುವುದು

ಮನದ ಲಗಾಮನು ಕಿತ್ತಾಶ್ವ

ಹುಚ್ಚು ಕುದುರೆಯ ಓಟ


ಬೇಸರವೊ ಬೇಜವಾಬ್ದಾರಿಯೋ

ನಾ ತಿಳಿಯೆ ಇದರ ಚಪಲತೆಯ

ಹರಟುವುದು ಹರಡುವುದು

ಬೇಕ ಬೇಡಾದ್ದನ್ನೆಲ್ಲ ಹರುವುದಿದು


ತೊಟ್ಟ ಬಾಣಗಳೆಷ್ಟೂ 

ಬಿಟ್ಟ ದಿಕ್ಕುಗಳೆಷ್ಟೂ

ಗುರಿಗೆ ತಾಗದ ಅಸ್ತ್ರಗಳಿನ್ನೆಷ್ಟೂ

ಗುರಿತಾಗಿ ಹತ್ಯಗೈದ ಪ್ರಾಣಗಳಿನ್ನೆಶ್ಟೋ. .                 


ಕ್ಷಮೆಯ ಔಷದಿಗಳಿಲ್ಲ

ಹೆಪ್ಪುಕಟ್ಟದ ಸ್ರಾವ

ಹರಿವುದು ಕಾಲ ಕಾಲದಲಿ

ತಡೆಯಲಾಗದ ಕೆಂಬಣ್ಣ


ಜಾಣನ ಜಾಣತನ

ಬೇಕೆಂದಾಗ ಮಾತು

ಅತಿ ಮೌನ ಸೌಖ್ಯವು

ನಿಯಂತ್ರಿತ ನಾಲಿಗೆಯು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ