ಸ್ವಾತಂತ್ರ್ಯದಿನಾಚರಣೆ
ಅಂತು ಬಂತು ಆಗಸ್ಟ್ ಹದಿನೈದು
ತುಂಬಿತಂತೆ ವರುಷಗಳು ಎಪ್ಪತ್ತೈದು
ಬಹು ಬಹು ಪಕ್ಷಗಳ ಆಳ್ವಿಕೆಯು
ಕಾಂಗ್ರೆಸ್, ಜನತಾ, ಭಾಜಾಪಾಗಳು
ನನ್ನ , ನಿನ್ನ ಪ್ರಭುತ್ವವಂತೆ ಜನತಂತ್ರದೊಳು!
ಬಡಪಾಯಿಗಳಿಗೆಲ್ಲ ಹೋದವೇ ಗೋಳು?
ಖಾದೀ ಹಾಕಿಕೊಂಡರು ಕೆಲ ಖದೀಮರು
ಖಾಲಿ ಕೈಗಳಿಗೆ ಐದುವರುಷಕ್ಕೊಮ್ಮೆ
ಮುಖವ ತೋರಿಸಿ ನೋಟುಗಳ ಹಂಚಿದರು
ಮತ್ತೆ ಪತ್ತೆ ಇಲ್ಲ ಶಾಸಕಾಂಗದ ವಂಚಕರು
ಅವರ ಹಿಂದಿಹುದು ಪ್ರಜಾಪ್ರಭುತ್ವದ ಬೆನ್ನೆಲುಬು
ಸರ್ ಎನಿಸಿಕೊಂಡು, ಕಾರ್ನಲ್ಲಿ ತಿರುಗುವ ಜನರು
ಸರ್ಕಾರೀ ಬಾಬೂಗಳು ಹೇಳುವರು ಸಬೂಬುಗಳು
ಕಾರ್ಯಾಂಗ ವಾಕ್ಯಗಳಿಗಿವರು ಹ್ರಸ್ವಬಿಂದು!
ಇನ್ನಾದರೂ ನ್ಯಾಯದೊರಕುವುದೆಂದರೆ ಮಿತ್ಯ
ದತ್ತ ತಾರೀಖು ಮುಂದೂಡುತ್ತ ತೆವಳುವುದು
ಕಾಯಬೇಕು ನೀವು ಸಾಯುವವರೆಗೂ
ನ್ಯಾಯಾಂಗವ ನೋಡುತ ಕಾಯ್ದು ಕುಳಿತಿಹರು ನೊಂದು
ಬಡಿದೆಬ್ಬಿಸುವ ಮಾಧ್ಯಮಗಳು ಇದಕೆ ಉತ್ತರವೇನು?
ಪರವಹಿಸಿ ದ್ವೇಶ ಹಗೆಗಳ ಹೊಗೆಯಾಡಿಸುವವರು
ಅಶ್ವತ್ತಾಮ ಸತ್ತಿಹನೆಂದು ಸುಳ್ಳು ಘೋಶಿಸುವರಿವರು
ನಂಬಲೊಲ್ಲೇ ನಾನು ಈ ಮಾಧ್ಯಮಗಳನು!
ಇದಕೆಲ್ಲ ಕೊನೆಯೇನು ಅಂತ್ಯೋದಯವು ಎಂತೊ?
ದೇಶ ಪ್ರೇಮಿಸುವ ಎಚ್ಚೆತ್ತ ಜನತೆ, ಮತ್ತವರ ಒಗ್ಗಟ್ಟು
ಚುಣಾವಣೆಗಳಲ್ಲಿ ಮತಗಳ ವ್ಯಾಪಾರ ಬೇಡ
ಮತಗಳನಾಧಾರಿಸಿ ವೋಟು ಕೊಡ ಬೇಡ
ತೆರಿಗೆಗಳ ಪಾವತಿಸಿ ಮುನ್ನಡೆಯಲ್ಲಿ ಪಾತ್ರವಹಿಸು
ಕಾನೂನುಲ್ಲಂಘನೆಯು ಬೇಡ,ಇರಲಿ ನಿನ್ನಲಿ ಶಿಸ್ತು
ನಿನ್ನ ಹಕ್ಕಿಗೆ ಹೋರಾಡಿ, ಭಾದ್ಯತೆಯ ನಿರ್ವಹಿಸು
ಸತ್ಪ್ರಜೆಯಾಗು ದೇಶದೇಳಿಗೆಗೆ ನೀ ಬಾಳು
ಹತಾಶನಾಗದಿರು ಮುನ್ನಡೆದಿರುವೆ ಬಹಳ
ಉದ್ಯಾನದಲಿ ಕಳೆಗಳಿರುವುದು ಸಹಜ
ಕಿತ್ತೊಗೆದು ಕಳೆಗಳನು ಸುಚಿಗೊಳಿಸೋಣ
ಈ ಕಾಡನ್ನು ಸುಂದರ ನಾಡಾಗಿಸೊ ಜಾಣ॥
-ನಾ ಶ್ರೀ ಮೋ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ