ಹೆಜ್ಜೆ ಗುರುತು



ನಡೆದ  ಪಥದ ಸ್ಮ್ರಿತಿಯು, ಕುರುಹು 

ಕಾಲ ಜಾರಿದಂತೆಯದುವು

ಅಳಿಸಿ, ನಶಿಸಿ ಮಾಯವು 

 

ಇರಲಿ ಕ್ಷಣ, ಘಳಿಗೆಗೆ 

ಅಲೆಯ ಬರುವ ಕಾಲಕೆ 

ಬರುವ ಅಲೆಯು ನಶಿಸಿ ಮತ್ತೆ 

ಇಡುವುದು ಹೊಸ ಗುರುತಿಗೆ 

 

ಯಾರ ಹೆಜ್ಜೆ ಅಲೆಮಾರಿಯಾಗಿ 

ಯಾರ, ಏನನರಸಿತೋ 

ಕಡಲ ತೀರದಿಂದ ಆಚೆ 

ಏನದು  ನಿರೀಕ್ಷೆಯೋ?

 

ಸತತ ಅಲೆಯ  ಸ್ವಚತೆ,

ಹೆಜ್ಜೆ ಹೆಜ್ಜೆ ಇಡುವಿಕೆ 

ಕಾಲಸಮರದಲ್ಲಿ ಜಯವು 

ಅನಂತದ ದಿಗಂತದಿಂ 

ಬರುವ ಕ್ರಮದ ನೀರಿಗೆ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ