ಮೈಲಿಗಲ್ಲು

 


ಹಾದಿಉದ್ದಕ್ಕು ಇಟ್ಟ ಇಲ್ಲೊಂದು 
ಅಲ್ಲೊಂದು ಮೈಲಿಗಲ್ಲುಗಳು 
ದಿಕ್ಸೂಚಿಯಾಗಿ, ಪಥದ ಕುರುಹನು ತೋರಿ 
ರಸ್ತೆಯಂಚಿನ ಬಿಳಿಯಕಲ್ಲುಗಳು 

ತಿಳಿದಾಕ್ಷರದಲ್ಲೊ, ತಿಳಿಯದಾಲಿಪಿಯಲ್ಲೊ 
ತಿಳಿಯಹೆಳಹೊರಟ, ನಿಂತಲ್ಲೆನಿಂತ ಕಲ್ಲದೇವರುಗಳು 
ಮುಂದಿನೂರಿನ ಕಹಳೆ, ಪಯಣಿಗನ ಮಿತ್ರನವ 
ಮಾಸಿ ನುಣುಪಾದ ಮುಪ್ಪಿದಾ ಕಲ್ಲು

ಬೇಸತ್ತ ಕಾಲಿಗೆ ಜೀವತುಂಬಿಸುವ ಅಮೃತ 
ನಡೆಮುಂದೆಯೆಂದು, ತನುವ ಹುರಿದುಂಬಿಸುತ
ಧ್ಯೇಯ ದಾರಿ ಇದು ಎಂದು ಮನಕೆ ಧ್ರುಡ ನೀಡುತ್ತ 
ಬಿಳಿಕಲ್ಲ ಮೇಲಿಟ್ಟ ಕಪ್ಪು ದಪ್ಪಾಕ್ಷ್ರಗಳು 

ತಪ್ಪಿದಾ ಹಾದಿಯಿದು, ನಡೆನೀನು ಹಿಂದಕ್ಕೆ 
ಬದಲಿಸು ನೀ ದಾರಿಯನು ಸೇರಲು ನಿನ್ನಾಗುರಿಯ 
ಎಚ್ಚರಿಸಿ ಕೂಗುತ್ತ ಸಾರುವ ಒಳಮನಸು 
ಅತಿ ಖಟೊರದ ಮಾತು ಮೌನದಲಿ ಹೇಳುವವ 
ರಸ್ತೆಯಂಚಿನ ನಿರೀಕ್ಷೆಯ ಸಾಲು ಈ ಮೈಲಿಗಲ್ಲುಗಳು 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ