ದಖಾವ್
ಮಾನವೀಯತೆಯ ಮೃತ್ಯು
ಮಾನವತೆಯ ಶತ್ರು
ಮಾನವ ಮಾನವನಿಗೆ ಎಸಗಿದ
ರಾಕ್ಷಸೀಯ ಈ ಕೃತ್ಯ
"ಕಾಯಕವೇ
ಸ್ವಾತಂತ್ರ್ಯ"
ಎಂದು ಘೋಷಿಸುವ ತಂತ್ರ
ಒಬ್ಬ ಮಾನವನಾ ಕೃತಿಯೋ
ಆ ಜನಸ್ತೋಮದ ಭ್ರಮೆಯೋ
ಸ್ಮೃತಿ ಅಳಸದ ಕ್ರಿಯೆಯು
ಮೂಡಿಸುವುದು ಜನರಲಿ ಭಯವು
"ಕಾಯಕವೇ
ಸ್ವಾತಂತ್ರ್ಯ"
ಎಂದು ಘೋಷಿಸುವ ತಂತ್ರ
ಸುತ್ತು ಮುಳ್ಳಿನ ತಂತಿ
ವಿದ್ಯುತ್ ಸಂವಹಿಸಿದ ಬೇಲಿ
ಆಳದಾ ಕಂದಕವು
ನಾಯಿ ರಕ್ಷರಾ ಪಹಳೆ
"ಕಾಯಕವೇ
ಸ್ವಾತಂತ್ರ್ಯ"
ಎಂದು ಘೋಷಿಸುವ ತಂತ್ರ
ಓಡುವುದಾದರು ಎಂತು
ಬಂದರಿಲ್ಲಿಗೆ ಮರಣ
ಕಾಯಕವು ಕಟುಸತ್ಯ
ಸ್ವಾತಂತ್ರ ಮೃತ್ಯುವಿಗೆ ಮಿಗಿಲು
"ಕಾಯಕವೇ
ಸ್ವಾತಂತ್ರ್ಯ"
ಎಂದು ಘೋಷಿಸುವ
ತಂತ್ರ
ಭೀಬತ್ಸ ರುದ್ರ ಭಯವು
ಸ್ಮಶಾನದ ಆ ಶುಬ್ರತೆಯೋ?
ರಣ ತಾಂಡವ ಸ್ಥಳವು
ನಾಜಿ ಜನರ ದಖಾವು
"ಕಾಯಕವೇ
ಸ್ವಾತಂತ್ರ್ಯ"
ಎಂದು ಘೋಷಿಸುವ ತಂತ್ರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ