ಅದ್ವೈತ


ಲೀನವಾದೆನು ನಾನು ನನ್ನತನದ ನನ್ನೊಳು
ಪರರ ಅರಿವೇಕೆನಗೆ ಪರನು ನಾನೇ

                             
ಪರನಾಗಲೆಂತೋ  ಅಲೆಯು ಕಡಲಕಡೆಗೆ ಬಾರೆ
ಧಾವಿಪುದು ಯೆಂತದುವು ಧರಣಿಯತ್ತ ?
ಅಂತ್ಯದಲಿ ಎದೆಗುಂದಿ ಧರೆಯ ಪಾದವ ತೊಳೆದು
ಪೋಗುವುದದು ಅನಂತದತ್ತ !
ಲೀನವಾದೆನು ನಾನು ನನ್ನತನದ ನನ್ನೊಳು
ಪರರ ಅರಿವೇಕೆನಗೆ  ಪರನು ನಾನೇ


ಉದ್ಭವಿಪುದು ಪ್ರತಿ ಕಿಡಿಯು ಬೆಳಕ ನೀಡುವೆನೆಂದು
ಕಿಡಿ ಕಿಡಿಯು ಸೇರುತಲೇ ಅಗ್ನಿ ಶಿಖರ
ಪುಡಿ ಕಿಡಿಯ ಬೆಳಕಿನಲಿ ಸಾಧಿಸವೆನನು ನಾವು
ಕಿಡಿಯ ಐಕ್ಯತೆಯಾಗೆ ಬೆಳಕು ಪ್ರಖರ
ಲೀನವಾದೆನು ನಾನು ನನ್ನತನದ ನನ್ನೊಳು
ಪರರ  ಅರಿವೇಕೆನಗೆ ಪರನು ನಾನೇ

 

ಮರ ಎಂಬುವವೇ ನಾವು ಪರ್ಣ ಒಂದನು ನೋಡಿ
ಅಲ್ಲಿರ್ಪ ಪೂ ಅಥವಾ ಟೊಂಗೆಯೊಂದನು ನೋಡಿ?
ಸೊಗಸಾದ ನೆರಳೀವ ಚಂದಾದಾ ತರುವು 
ಲೀನವಾದೆನು ನಾನು ನನ್ನತನದ ನನ್ನೊಳು
ಪರರ ಅರಿವೇಕೆನಗೆ ಪರನು ನಾನೇ
ಬೇರ್ಕಾಂಡ ಪರ್ಣ ಪೂ ಸೇರಲದು ಮೈಗೂಡುವುದು

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ