ನಾನು ಹಾಗು ಮೋಡ


 

ತಿಳಿನೀಲಿ ನಭದಲಿ ಬಿಳಿ ಹತ್ತಿಯ ಮೋಡ
ತೇಲುತ್ತ, ಮೈ ಬದಲಿಸಿ ಹೋಗುವೆ ನೀನೆತ್ತ?
ನನ್ನಂತೆಯೆ ನೀನೆಂದರೆ ಅಚ್ಚರಿ ನಿನಗೇಕೆ?
ತಿಳಿದಿಲ್ಲದ ಜೀವನದಲಿ ನಿನ್ನಂತೆ ನಾ ನೋಡ
ತಿಳಿನೀಲಿ ನಭದಲಿ ಬಿಳಿ ಹತ್ತಿಯ ಮೋಡ

ತೇಲುತ್ತ ಮೈ ಬದಲಿಸಿ ನಡೆವೆ ನಾ ಮುಂದೆ
ಕೇಳಿಲ್ಲದ, ತಿಳಿದಿಲ್ಲದ ಕಾಲದ ಈ ಪಥದಿ
ನಡೆಯುತ್ತಾ, ಸವೆಯುತ್ತ ಗಾಳಿಗೆ ಮೈಯೊಡ್ಡಿ
ಕರಗುವೆನು ಅಂತ್ಯದಲಿ ನಿನ್ನಂತೆಯೇ ನಾನು
ಕೇಳಿಲ್ಲಿ, ವಿಧಿ ಇಲ್ಲವೋ ನಮಿಬ್ಬರ ಈ ಪಯಣ
ತಿಳಿನೀಲಿ ನಭದಲಿ ಬಿಳಿ ಹತ್ತಿಯ ಮೋಡ

ಜನಮನಕೆ ಕಾಣುವ ನಾವ್ ಬಗೆ ಬಗೆಯಾ ದೃಶ್ಯಾ
ಹಲವೊಮ್ಮೆ ಮರಗಿಡವೋ, ಮುದುಕನ ಆ ಮುಖವೋ
ನಮದಲ್ಲವೋ ಈ ಕನಸು ಉಲ್ಲಾಸದ ಭ್ರಮೆಯೂ
ವಾಸ್ತವವೋ, ಕಲ್ಪನೆಯೋ ತ್ಲಿದಿಲ್ಲದ ಬದುಕು
ಶಾಶ್ವತವೋ ಈ ಕ್ಷಣಕೆ, ಮುಂದಿನ ಮಾತೇಕೆ?
ತಿಳಿನೀಲಿ ನಭದಲಿ ಬಿಳಿ ಹತ್ತಿಯ ಮೋಡ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ