ಡೈರಿ


 ನೆನಪಿನಾ ಪುಟಗಳಲಿ ಜೀವನದ ಡೈರಿ

ಕಾಲವೆಂಬ ಕಾಗದದಲಿ ಅನುಭವಗಳ ಲೇಖನಿಕೆ
ಕಣ್ಣಿರು, ಬೆವರುಗಳ ಕಪ್ಪು, ಕೆಂಪು ಶಾಹಿ
ಸಿಹಿ, ಕಹಿಯ ಹ್ರಸ್ವ, ಧೀರ್ಘಗಳ ನಡುವೆ ಜಂಜಾಟ
ನೆನಪಿನಾ ಪುಟಗಳಲಿ ಜೀವನದ ಡೈರಿ


ಮೊದಮೊದಲ ಪುಟಗಳಲಿ ಮುಗ್ಧತೆಯಾ ಮೋಡಿ
ಅಮ್ಮ ಎಂಬ ಎರದಕ್ಷರ ತುಂಬಿದೆ ಪುಟಗಳಲಿ
ಅಕ್ಷರಮಾಲೆ, ಮಗ್ಗಿಗಳ ಚೆಲ್ಲಾಟ
ನೆನಪಿನಾ ಪುಟಗಳಲಿ ಜೀವನದ ಡೈರಿ

ಗಿಲ್ಲಿ, ಕ್ರಿಕೆಟ್ಟು, ಅಇಸ್-ಪೈಸ್, ಜೂಟಾಟ
ಯೋವ್ವನದಾ ಧರ್ಪದಲಿ ಸರಿ ಸಾಟಿ ಇಲ್ಲದ ಧಾಟಿ
ಶಬ್ಧಾರ್ಭತ, ಪದಚಳಕದ ರೂಢಿ
ಅಸ್ತಿತ್ವದ ಸೆಣಸಾಟ, ಜಗಗೆಲ್ಲುವ ಚಲವೆಲ್ಲ
ಚಿಗುರು ಮೀಸೆ, ಕಾಲೇಜು ಸಹಪಾತಿಗಳ ಒಡನಾಟ
ನೆನಪಿನಾ ಪುಟಗಳಲಿ ಜೀವನದ ಡೈರಿ

ದಾಂಪತ್ಯದ ಏರಿಲಿಕೆಗಳ ಮೂರನೆಯ ಅಧ್ಯಾಯ
ಸುಖ ಸ್ವರ್ಗದ ಬಾಗಿಲಲ್ಲಿ, ಆಯವ್ಯಯ ಹೋರಾಟ
ಜೋಡಿಎತ್ತಲ್ಲಿ ಒಂದಾಗಿ, ಬಂಡಿ ಎಳೆಯುವ ಕಾಲ
ಬಂಡಿ ಹೋಗುವ ದಾರಿ ಮಾಲಿಕನದೆಮ್ದು ತಿಳಿದು
ನೆನಪಿನಾ ಪುಟಗಳಲಿ ಬರೆದೆ ನಾ ಡೈರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರ

ಅಗಲಿಕೆ

ಗೀತಕ್ಕನ ಹಕ್ಕಿ