ಬಣ್ಣದ ಬೆವರು
ಸರ್ರೆಂದು ಕಾರ್ನಲ್ಲಿ ಹೋಗುತಿದ್ದ ನಾನು
ಹಠಾತ್ನೆ ನಿಲ್ಲ
ಬೇಕಾಯಿತು
ಕಾರಣವಿಷ್ಟೇ
ಬಣ್ಣ ಬದಲಾಯಿಸಿತು
ಟ್ರಾಫಿಕ್ ದೀಪದ
ಬಣ್ಣ - ಕೆಂಪಾಗಿ ಬದಲಾಯಿಸಿತು
ನಿಂತ ಗಾಡಿಗೆ
ಓಡಿಬಂದ
ಹರಕು ಬಟ್ಟೆಯ
ಮುದುಕನೊಬ್ಬ
ಕೈ ತುಂಬ ಬಣ್ಣ
ಬಣ್ಣದ ಬಾಕ್ಸುಗಳು
ಚಾಚಿ
ಕರೆಯುತ್ತಿದ್ದ ನನ್ನನ್ನು
ಅಂಗಲಾಚಿ
ಬೇಡುತಿದ್ದ ಕೊಳ್ಳಲು ಒಂದಾದರು
ಇದ್ದ ಸಮಯ
ಕಳೆಯಲೆಂದೋ
ಸ್ವಲ್ಪ
ಕುಚೇಷ್ಟೆ ಮಾದಲೆಂದೋ
ಕಿಟಕಿ ಇಳಿಸಿ
ಕೇಳಿದೆ - "ಏನೋ ಇದು ಮುದುಕ?" ಎಂದು
ಹಲ್ಲು ಕಿರಿಸಿ
"ಪೇಪರ್ ಕೆರ್ಚಿಫು ಸಾರ್" ಎಂದ
" ಬರಿ ಹತ್ತು
ರುಪಾಯಿ - ಮಾರ್ಕೆಟ್ನಲ್ಲಿ ಇಪ್ಪತ್ತು"
ನಕ್ಕು ನುಡಿದೆ
ಹಾಸ್ಯಕ್ಕೆಂದು
"ಬೆವರು ಹೀರುವುದೋ
ಇದು?" ಎಂದು
ಹಾಸ್ಯಕ್ಕೆ
ಹಾಸ್ಯವೋ, ರೋಸಿಹೋದ ಮಾತದುವೋ?
ನಿಟ್ಟುಸಿರು
ಬಿಟ್ಟು ನುಡಿದ
"ತಮಾಷೆ ಮಾಡ ಬೇಡಿ
ಸಾರ್"
"ತಮಾಷೆ ಮಾಡ ಬೇಡಿ
ಸಾರ್"
ಇದು ಲಿಪ್
ಸ್ಟಿಕ್ ಕ್ಲೀನ್ ಮಾಡುತ್ತದೆ
ಮಕ್ಕಳ ಚಾಕಲೇಟು ,ಕೆಳಗೆ ಬಿದ್ದ ಐಸ್ಕ್ರೀಂ ಕೂಡ
ಕಾರ್ನಲ್ಲಿ
ತಿರುಗುವ ನಿಮಗೆ
ಬೆವರು
ಬರುವುದಾದರೂ ಎಂತು?
ಕೊಳ್ಳಿ ಹಸಿರಾಗುವ ಮೊದಲು, ನನ್ನ
ಉಸಿರಿರುವಾಗಲೇ
ಗಿಟ್ಟಿದ ಒಂದು
ರೂಪಾಯಿಗೆ ಹೊಟ್ಟೆ ತುಂಬಿಸಿಕೊಳ್ಳುವೆ
ಇಷ್ಟಂತೂ ಸತ್ಯ -
ಇದು ನನ್ನ ಬೆವರು ಹೀರುತ್ತದೆ!
ಕ್ಷಣದಲ್ಲಿ ಟ್ರಾಫಿಕ್ ದೀಪದ ಬಣ್ಣ ಬದಲಾಯಿತು
ಹಿಂದಿನ ಕಾರಿನ
ಹಾರ್ನ್ ಆರ್ಭಟ
ಗೇರ್ ಬದಲಿಸಿ
ಕಾರು ಚಲಿಸಿದೆ
ರೇರ್ ವ್ಯಿವ್ ಮಿರರ್ನಲ್ಲಿ ನನ್ನ ನಾ ನೋಡಿದೆ,
ಮುದುಕನನ್ನು ಕೂಡ
- ಕಾಯುತಿದ್ದ ಮುಂದಿನ ಕೆಂಪಿಗೆ
ಬಣ್ಣ ಬದಲಾಯಿತು
ಅ ಕ್ಷಣದಲ್ಲಿ
ನನ್ನ ಬಣ್ಣ ಬದಲಾಯಿತು!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ